Lucknow: ಮದುವೆಗೆ ಇನ್ನೇನು ಕೆಲವೇ ಗಂಟೆ ಇದ್ದು, ವಿವಾಹ ಸಂಪನ್ನಗೊಳಲಿತ್ತು. ಅಷ್ಟರಲ್ಲಿ ವಧುವೋರ್ವಳು ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ. ವಧು ಪುಷ್ಪ ಎಂಬಾಕೆ ನಾಪತ್ತೆಯಾದಾಕೆ.
ಪುಷ್ಪ ಮುಕೇಶ್ ಎನ್ನುವವನ್ನು ಪ್ರೀತಿಸುತ್ತಿದ್ದು, ಐದು ವರ್ಷ ಪ್ರೀತಿಸಿದ ನಂತರ ಮದುವೆ ನಿಶ್ಚಯವಾಗಿತ್ತು. ಅಂದ ಹಾಗೆ ಇವರ ಮದುವೆಗೆ ಎರಡೂ ಮನೆಯವರ ವಿರೋಧವಿತ್ತು. ಹಾಗೂ ಹೀಗೂ ಹೇಗೊ ಮದುವೆ ಕೊನೆಗೂ ನಿಶ್ಚಯವಾಯಿತು. ಮಾ.6 ರಂದು ಮದುವೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು.
ಹಳದಿ ಸಮಾರಂಭ ಕೂಡಾ ಚೆನ್ನಾಗಿಯೇ ನಡೆಯಿತು. ಮಾ.5 ರ ರಾತ್ರಿ ಮದುವೆಯ ಹಿಂದಿನ ದಿನ ಪುಷ್ಪ ಮುಕೇಶ್‌ಗೆ ವಾಟ್ಸಾಪ್‌ನಲ್ಲಿ ” ನಾವು ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇವೆ” ಎಂದು ಮೆಸೇಜ್ ಕಳುಹಿಸಿ ಮನೆ ಬಿಟ್ಟು ಹೋಗಿದ್ದಾಳೆ. ಮುಖೇಶ್ ತಾಯಿ ಖಡ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ತನ್ನ ಭಾವಿ ಸೊಸೆಯನ್ನು ಹುಡುಕುವಂತೆ ಕೇಳಿಕೊಂಡಿದ್ದಾರೆ.
ಆರಂಭದಲ್ಲಿ ವಿರೋಧ ವ್ಯಕ್ತ ಪಡಿಸಿದ ಎರಡೂ ಮನೆಯವರು ನಂತರ ಮದುವೆಗೆ ಒಪ್ಪಿಗೆ ನೀಡಿತ್ತು. ವರನ ಕುಟುಂಬದವರು ಹೆಚ್ಚಿನ ವರದಕ್ಷಿಣೆಗೆ ಒತ್ತಾಯ ಮಾಡಿತ್ತು. ಹೀಗಾಗಿ ಎರಡು ತಿಂಗಳ ಹಿಂದೆ ನಡೆಯಬೇಕಾಗಿದ್ದ ಮದುವೆ ರದ್ದಾಯಿತು. ಅನಂತರ ಮತ್ತೆ ರಾಜಿ ಸಂಧಾನ ಮಾಡಿಕೊಂಡು ವರನ ಕಡೆಯವರು ಮತ್ತೆ ಹೊಸ ಬೇಡಿಕೆಗಳನ್ನು ಇಟ್ಟರು. ಇದು ಪುಷ್ಪಾಳನ್ನು ತೀವ್ರ ಆತಂಕ ಉಂಟುಮಾಡಿತು.
ಮದುವೆ ಮತ್ತೆ ಮುಂದೂಡಿಕೆ ಆಗುತ್ತೆ ಎನ್ನುವ ಭೀತಿಯಲ್ಲಿ ಪುಷ್ಪ ಮನೆ ಬಿಟ್ಟು ಹೋಗಿರಬಹುದು ಎಂದು ಸಹೋದರಿ ಹೇಳಿಕೆ ನೀಡಿದ್ದಾರೆ. ನೆಬುವಾ ನೌರಂಗಿಯಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
