Home » ಕರಾವಳಿ ಪ್ರವಾಸೋದ್ಯಮ ನೀತಿಗೆ ಜ.10 ರಂದು ಮಂಗಳೂರಿನಲ್ಲಿ ಸಭೆ: ಡಿಕೆಶಿ

ಕರಾವಳಿ ಪ್ರವಾಸೋದ್ಯಮ ನೀತಿಗೆ ಜ.10 ರಂದು ಮಂಗಳೂರಿನಲ್ಲಿ ಸಭೆ: ಡಿಕೆಶಿ

0 comments
Property Tax

ಕಾರವಾರ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತಿದ್ದು, ಈ ಕುರಿತು ಜ.10 ರಂದು ಮಂಗಳೂರಿನಲ್ಲಿ ಕರಾವಳಿಯ ಮೂರು ಜಿಲ್ಲೆಯ ಜಿಲ್ಲಾಧೀಕಾರಿಗಳು, ಪ್ರವಾಸೋದ್ಯಮಮಿಲಾಖೆ ಅಧಿಕಾರಿಗಳ ಸಭೆ ಕರೆದಿರುವುದಾಗಿ ಹೇಳಿದರು.

ಕರಾವಳಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ಜ.10 ರ ಸಭೆಗೆ ರಾಜ್ಯದ ಹಾಗೂ ವಿದೇಶದ ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಮೂರು ಜಿಲ್ಲೆಗಳ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರು, ಸ್ಪೀಕರ್‌ ಇರುತ್ತಾರೆ. ಸ್ಥಳೀಯ ಶಾಸಕರು, ಕರಾವಳಿ ಜಿಲ್ಲೆಯ ಸಂಸದರಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.

You may also like