Home » Bank: ದೇಶದಲ್ಲಿ ಇಂದು 15 ಬ್ಯಾಂಕುಗಳ ವಿಲೀನ!!

Bank: ದೇಶದಲ್ಲಿ ಇಂದು 15 ಬ್ಯಾಂಕುಗಳ ವಿಲೀನ!!

0 comments

Bank: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರವು ಯಾವಾಗಲೂ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಅಂತೆಯೇ ಇದೀಗ ಮೇ ತಿಂಗಳಿನ ಆರಂಭದಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಸರ್ಕಾರವು ಸುಮಾರು 15 ಬ್ಯಾಂಕುಗಳನ್ನು ವಿಲೀನ ಮಾಡಲು ಮುಂದಾಗಿದೆ.

ಹೌದು, ಸರ್ಕಾರವು ಒಂದು ರಾಜ್ಯ-ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೀತಿಗೆ ಹಸಿರು ನಿಶಾನೆ ತೋರಿಸಿದೆ. ಇದರ ಅಡಿಯಲ್ಲಿ, ಈಗ ಮೇ 1 ರಿಂದ 15 ಗ್ರಾಮೀಣ ಬ್ಯಾಂಕುಗಳು ವಿಲೀನಗೊಳ್ಳಲಿವೆ. ಹೀಗಾಗಿ ಮೇ 1 ರಿಂದ 43 ಆರ್‌ಆರ್‌ಬಿ ಬ್ಯಾಂಕುಗಳಲ್ಲಿ 15 ವಿಲೀನಗೊಳ್ಳಲಿವೆ.

ಬ್ಯಾಂಕ್ ಗಳ ವಿಲೀನ ಏಕೆ?

ಈ ವಿಲೀನದೊಂದಿಗೆ, ದೇಶದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 43 ರಿಂದ 28 ಕ್ಕೆ ಇಳಿಯಲಿದೆ. ವಿಲೀನಗೊಳ್ಳಲಿರುವ 15 ಬ್ಯಾಂಕುಗಳಲ್ಲಿ ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನದ ಗ್ರಾಮೀಣ ಬ್ಯಾಂಕುಗಳು ಸೇರಿವೆ. ಬ್ಯಾಂಕುಗಳ ವಿಲೀನವು ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಏಕೀಕೃತ IFSC ಮತ್ತು MICR ಕೋಡ್‌ಗಳನ್ನು ಹೊಂದಿರುವುದು ವಹಿವಾಟುಗಳನ್ನು ಸುಲಭಗೊಳಿಸುತ್ತದೆ ಮತ್ತು ಸಾಲ ಪ್ರಕ್ರಿಯೆ ಸುಲಭವಾಗುತ್ತದೆ.

You may also like