Home » Belthangady: ಚಾರ್ಮಾಡಿಯಲ್ಲಿ ಕಾಡಾನೆ ಜೊತೆ ಸೆಲ್ಪಿ ತೆಗೆಯುವ ಸಾಹಸ ಕಠಿಣ ಕಾನೂನು ಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆ!

Belthangady: ಚಾರ್ಮಾಡಿಯಲ್ಲಿ ಕಾಡಾನೆ ಜೊತೆ ಸೆಲ್ಪಿ ತೆಗೆಯುವ ಸಾಹಸ ಕಠಿಣ ಕಾನೂನು ಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆ!

0 comments

Belthangady: ರಸ್ತೆಗೆ ಬಂದ ಕಾಡಾನೆ ಜೊತೆ ಸೆಲ್ಸಿಫೋಟೋ ತೆಗೆಯುವ ಸಾಹಸಕ್ಕೆ ಕೈ ಹಾಕಿದ ವಾಹನ ಸವಾರರಿಗೆ ಅರಣ್ಯ ಸಚಿವರು ಬಿಸಿ ಮುಟ್ಟಿಸುವ ಕೆಲಸ ಮಾಡಲು ಮುಂದಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ 4 ನೇ ತಿರುವಿನಲ್ಲಿ ಮೇ.22 ರಂದು ಬೆಳಗ್ಗೆ ರಸ್ತೆಗೆ ಬಂದಿದ್ದ ಕಾಡನೆ ಜೊತೆ ವಾಹನ ಸವಾರರು ಇಳಿದು ಸೆಲ್ಸಿ ಫೋಟೋ ತೆಗೆಯುತ್ತಿದ್ದ ಬಗ್ಗೆ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ವಾಹನ ನಂಬರ್‌ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಮತ್ತು ಅರಣ್ಯದ ಪ್ರವೇಶದ ಬಳಿ ಎಚ್ಚರಿಕೆ ಫಲಕ ಹಾಕಿ ಅರಿವು ಮೂಡಿಸಲು ಸಂಬಂಧ ಪಟ್ಟವರಿಗೆ ಸ್ಪಷ್ಟ ಆದೇಶ ಹೊರಡಿಸಲು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚನಾ ಪತ್ರ ಮೇ.22 ರಂದು ಸಂಜೆ ಹೊರಡಿಸಿದ್ದಾರೆ.

You may also like