8
Kapu: ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದ ನಂತರ ಉಡುಪಿಗೆ ಮೊದಲ ಬಾರಿಗೆ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಪು (kapu hosa marigudi)ಹೊಸ ಮಾರಿಗುಡಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮತ್ತೆ ಅದೇ ಉತ್ಸಾಹದಿಂದ ಕೆಲಸಕ್ಕೆ ಮರಳಿದ್ದೇನೆ. ತಾಯಿಯ ಆಶೀರ್ವಾದ ಪಡೆದು ಕೆಲಸ ಶುರು ಮಾಡ್ತೇನೆ. ದೇವಿಯ ಸನ್ನಿಧಾನದಲ್ಲಿ ಉತ್ತಮ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.
ದೇಗುಲದ ವಿಶೇಷತೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಸ್ವರ್ಣ ಗದ್ದುಗೆಯ ಮೇಲೆ ಕುಳಿತ ತಾಯಿಯನ್ನು ನೋಡಿದ್ರೆ ಭಾರತದ ಸಂಸ್ಕೃತಿ ನಿಜ ಅನ್ನೋದು ಗೊತ್ತಾಗುತ್ತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
