ಕಡಬ: ಸರ್ಕಾರಿ ಕಛೇರಿಯಲ್ಲಿ ಸಣ್ಣ ಪುಟ್ಟ ಸೇವೆಗೂ ಅಧಿಕಾರಿಗಳು ಜನರನ್ನು ವಿನಾಃ ಕಾರಣ ನೀಡಿ ಅಲೆದಾಡಿಸುವ ಮತ್ತು ಜನ ಸಾಮನ್ಯನಿಗೆ ಸೇವೆ ನೀಡುವುದನ್ನು ಮರೆತು ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಡುವ ಬಗ್ಗೆ ಹಲವಾರು ದೂರುಗಳು ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳಂತಹ ಉನ್ನತ ಅಧಿಕಾರಿಗಳನ್ನು ಗ್ರಾಮಕ್ಕೆ ಮಟ್ಟಕ್ಕೆ ಕರೆಸಿಕೊಂಡು ಜನರ ಸಮಸ್ಯೆಗೆ ಗ್ರಾಮ ಮಟ್ಟದಲ್ಲಿ ಪರಿಹಾರ ನೀಡುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಚಿವ ಎಸ್ ಅಂಗಾರ ಹೇಳಿದರು.
ಅವರು ಕಡಬ ತಾಲೂಕು ಕೊಯಿಲ ಗ್ರಾಮದ ಬಿಜೆಪಿ ೩ ನೇ ಬೂತಿನ ಅಧ್ಯಕ್ಷರಾದ ಸುಭಾಶ್ ಶೆಟ್ಟಿ ಅರ‍್ವಾರ ಎಂಬುವರ ಮನೆಯಲ್ಲಿ ನಡೆದ ಬೂತ್ ಅಧ್ಯಕ್ಷ ನಾಮಫಲಕ ಅಳವಡಿಕೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಅಭಿವೃದ್ದಿಯೇ ಬಿಜೆಪಿಯ ಮೂಲಮಂತ್ರ. ಬಿಜೆಪಿ ಅಧಿಕಾರ ಪಡೆದುಕೊಂಡ ಬಳಿಕ ದೇಶದಲ್ಲಿ, ರಾಜ್ಯದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ತಳಮಟ್ಟದ ವ್ಯಕ್ತಿಗೂ ಸೌಲಭ ದೊರಕಬೇಕೆಂಬ ಬಿಜೆಪಿಯ ಅಂತ್ಯೋದಯ ಕಲ್ಪನೆ ಸಾಕಾರಗೊಳ್ಳುತ್ತಿದೆ ಎಂದು ಸಚಿವ ಎಸ್ ಅಂಗಾರ ಹೇಳಿದರು.
ಸಾಮೂಹಿಕ ನಿರ್ಧಾರ, ವೈಚಾರಿಕತೆ , ಆರ್ಥಿಕ ಪರಿಶುದ್ದತೆಗೆ ಬಿಜೆಪಿ ಪಕ್ಷದಲ್ಲಿ ಆಧ್ಯತೆ ನೀಡಲಾಗುತ್ತದೆ. ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ತ್ಯಾಗ ಮನೋಭಾವನೆಯಿಂದ ದುಡಿಯುವ ಕಾರ್ಯಕರ್ತನನ್ನು ಪಕ್ಷ ಯಾವತ್ತು ಗುರುತಿಸುತ್ತದೆ. ಹೀಗಾಗಿ ತಲಮಟ್ಟದ ಕಾರ್ಯಕರ್ತನಿಗೂ ಉನ್ನತ ಹುದ್ದೆಯ ಜವಬ್ದಾರಿ ನೀಡಲಾಗುತ್ತಿದೆ. ಬಿಜೆಪಿ ಸರ್ಕಾರದ ಸಾಧನೆಯನ್ನು ಪ್ರತಿ ಮನೆಗಳಿಗೆ ಮುಟ್ಟಿಸುವ ಕಾರ್ಯ ಪಕ್ಷದ ಕಾರ್ಯಕರ್ತರಿಂದ ನಡೆಯಬೇಕು ಆ ಮೂಲಕ ತಲಮಟ್ಟದಿಂದ ಪಕ್ಷವನ್ನು ಸಂಘಟಿಸುವಲ್ಲಿ ಶ್ರಮಿಸಬೇಕು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಆಲಂಕಾರು ಸಿ ಎ ಬ್ಯಾಂಕ್ ಅಧಕ್ಷ ಧರ್ಮಪಾಲ ರಾವ್ ಕಜೆ, ಬಿಜೆಪಿ ಕೊಲ ಗ್ರಾಮದ ೩ ನೇ ಬೂತಿನ ಅಧ್ಯಕ್ಷ ಸುಬಾಶ್ ಶೆಟ್ಟಿ ಆರ‍್ವಾರ, ಕೊಲ ಗ್ರಾ.ಪಂ ಸದಸ್ಯೆ ಪುಷ್ಪಾ ಮೊದಲಾದವರು ಉಪಸ್ಥಿತರಿದ್ದರು. ಕೊಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುದೀಶ್ ಪಟ್ಟೆ ಸ್ವಾಗತಿಸಿ ವಂದಿಸಿದರು.
