Home » KKRTC: ಕೆಕೆಆರ್ ಟಿಸಿ ಡಿಸಿ ಸಸ್ಪೆಂಡ್ ಮಾಡುವಂತೆ ಸಚಿವ ಜಮೀರ್ ಅಹ್ಮದ್ ಸೂಚನೆ

KKRTC: ಕೆಕೆಆರ್ ಟಿಸಿ ಡಿಸಿ ಸಸ್ಪೆಂಡ್ ಮಾಡುವಂತೆ ಸಚಿವ ಜಮೀರ್ ಅಹ್ಮದ್ ಸೂಚನೆ

0 comments

KKRTC: ಕೆಡಿಪಿ (KDP) ಸಭೆಯಲ್ಲಿ ಭಾಗಿಯಾಗದ ಕೆಕೆಆರ್ ಟಿಸಿ ಅಧಿಕಾರಿಗಳ ವಿರುದ್ಧ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ಜಮೀರ್ ಅಹ್ಮದ್ ಆಕ್ರೋಶ ಗೊಂಡಿದ್ದು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

ಕೆಡಿಪಿ ಸಭೆಗೆ ಗೈರಾಗಿದ್ದ ಬಳ್ಳಾರಿ ಕೆಕೆಆರ್ ಟಿಸಿ (KKRTC) ಡಿಸಿ ಇನಾಯತ್ ಅವರನ್ನು ಅಮಾನತು ಮಾಡುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಯಾವ ಸಭೆಗೂ ಕೆಕೆಆರ್ ಟಿಸಿ ಅಧಿಕಾರಿ ಬರುವುದಿಲ್ಲವೇ? ಕೆಕೆಆರ್ ಟಿಸಿ ಡಿಸಿ ಇನಾಯತ್ ವಿರುದ್ಧ ಜನಸ್ಪಂದನಾ ಕಾರ್ಯಕ್ರಮದಲ್ಲಿಯೂ ಹಲವು ದೂರುಗಳು ಬಂದಿವೆ. ಮಕ್ಕಳಿಗೂ ಯಾವುದೇ ಬಸ್ (Bus) ವ್ಯವಸ್ಥೆ ಮಾಡುತ್ತಿಲ್ಲ. ಶಾಸಕರಾದ ಬಿ.ನಾಗೇಂದ್ರ, ಜೆ.ಎನ್.ಗಣೇಶ್ ಅವರು ಕೂಡ ಅಧಿಕಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ತಕ್ಷಣ ಅವರನ್ನು ಸೇವೆಯಿಂದ ಮಾನತು ಮಾಡುವಂತೆ ಸೂಚನೆ ನೀಡಿದರು.

ಇದನ್ನೂ ಓದಿ:Karnataka: ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ ಆದೇಶ

You may also like