Home » ಅಪ್ರಾಪ್ತ ಬಾಲಕನಿಂದ ಕಾರು ಚಾಲನೆ!! ತಂದೆಗೆ ಬಿತ್ತು ಬರೋಬ್ಬರಿ 25 ಸಾವಿರ ಫೈನ್

ಅಪ್ರಾಪ್ತ ಬಾಲಕನಿಂದ ಕಾರು ಚಾಲನೆ!! ತಂದೆಗೆ ಬಿತ್ತು ಬರೋಬ್ಬರಿ 25 ಸಾವಿರ ಫೈನ್

0 comments

ಅಪ್ರಾಪ್ತ ಬಾಲಕನಿಗೆ ಕಾರು ಚಾಲನೆಗೆ ಅವಕಾಶ ಮಾಡಿಕೊಟ್ಟ ತಂದೆಗೆ ಬರೋಬ್ಬರಿ 25 ಸಾವಿರ ದಂಡ ವಿಧಿಸಿದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯಿಂದ ವರದಿಯಾಗಿದ್ದು, ಇಂತಹ ಘಟನೆಗಳಿಂದ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಬಹುದು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಜಿಲ್ಲೆಯ ಎನ್ ಆರ್ ಪುರ ನಿವಾಸಿ ಇಲಿಯಾಸ್ (41) ಎಂಬವರೇ ದಂಡ ಪಾವತಿಸಬೇಕಾದ ವ್ಯಕ್ತಿಯಾಗಿದ್ದು, ವಾಹನ ಚಾಲನೆಯ ವೇಳೆ ಅಪ್ರಾಪ್ತ ಬಾಲಕನಿಂದ ಕಾರು ಚಾಲನೆ ಮಾಡಿಸಿದ್ದ ಎನ್ನಲಾಗಿದೆ.

ಇಲ್ಲಿನ ಕರ್ನಾಟಕ ಸಂಘದ ಬಳಿಯ ರಸ್ತೆಯಲ್ಲಿ ಶಿವಮೊಗ್ಗ ಸಂಚಾರಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಂದರ್ಭ ಪರವಾನಗಿ ಇಲ್ಲದ ಬಾಲಕ ವಾಹನ ಚಲಾಯಿಸಿದ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಇಂತಹದೊಂದು ಬೃಹತ್ ಮೊತ್ತದ ದಂಡ ಸಹಿತ ತೀರ್ಪು ಹೊರಬಿದ್ದಿದೆ.

You may also like

Leave a Comment