Home » Missing: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ 3 ಯುವಕರು ನಾಪತ್ತೆ

Missing: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ 3 ಯುವಕರು ನಾಪತ್ತೆ

by V R
0 comments

Missing: ಮಂತ್ರಾಲಯಕ್ಕೆ ಬಂದಿದ್ದ ಮೂವರು ಯುವಕರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆಂದು ಹೋಗಿದ್ದ ವೇಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ಅಜಿತ್‌ (19), ಸಚಿನ್‌ (20), ಪ್ರಮೋದ್‌ (20) ನಾಪತ್ತೆಯಾದ ಯುವಕರು. ಮಂತ್ರಾಲಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಅರಸೀಕರೆ ತಾಲೂಕಿನ ಜಾವಗಲ್‌ ಗ್ರಾಮದ ನಿವಾಸಿಗಳಾಗಿದ್ದ ಇವರುಗಳು ಡಿಗ್ರಿ ಓದುತ್ತಿದ್ದಾರೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ.

ಶನಿವಾರ ಯುವಕರ ತಂಡ ಮಂತ್ರಾಲಯಕ್ಕೆ ಬಂದಿದ್ದು, ಸಂಜೆ ಸಮಯದಲ್ಲಿ ನದಿಗೆ ಸ್ನಾನಕ್ಕೆಂದು ಹೋಗಿದ್ದು, ನಾಪತ್ತೆಯಾಗಿದ್ದಾರೆ. ನದಿ ಸುತ್ತ ಹುಡುಕಲಾಗಿದೆ. ಆದರೆ ಸಿಗದ ಕಾರಣ ಸ್ನೇಹಿತರಿಂದ ಪೊಲೀಸರಿಗೆ ಮಾಹಿತಿ ದೊರಕಿದೆ. ಮಂತ್ರಾಲಯ ಮಠದ ಆಡಳಿತ ಮಂಡಳಿ ಈ ಕುರಿತು ಮಾಹಿತಿ ಪಡೆದಿದೆ.

You may also like