Cricket: ದೆಹಲಿ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್ ಅವರು ಮಂಡಳಿಯ ಪ್ರಧಾನ ಕಚೇರಿಯಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
1997-98 ರಿಂದ 2016-17ರವರೆಗಿನ ವೃತ್ತಿಜೀವನದಲ್ಲಿ 157 ಪ್ರಥಮ ದರ್ಜೆ, 130 ಲಿಸ್ಟ್ ಎ ಮತ್ತು 55 ಐಪಿಎಲ್ ಪಂದ್ಯಗಳನ್ನು ಆಡಿರುವ ಮನ್ಹಾಸ್ ಆಡಿದ್ದಾರೆ.
ಇದನ್ನೂ ಓದಿ:ಜನಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಮ್‌ನಲ್ಲಿ ಹಿಂದೂ ಎಂದು ಬರೆಯಿಸಬೇಡಿ- ಜೈನ ಅಸೋಸಿಯೇಷನ್ ಕರೆ
ಈಗಾಗಲೇ ನವದೆಹಲಿಯಲ್ಲಿ ನಡೆದ ಅನೌಪಚಾರಿಕ ಸಭೆಯ ನಂತರ 45 ವರ್ಷದ ಮನ್ಹಾಸ್ ಅವರ ಹೆಸರು ಮುನ್ನೆಲೆಗೆ ಬಂದಿತು, ಅಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರನ್ನು ಮುಂದಿಡಲು ಅಧಿಕಾರಗಳು ತಿಳಿಸಿದ್ದರು. ಇನ್ನು ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿನ ಇತರ ಕೆಲವು ಪ್ರಮುಖ ಹುದ್ದೆಗಳನ್ನು ಮುಂದಿನ ಭಾನುವಾರ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭರ್ತಿ ಮಾಡಲಾಗುವುದು.
