Home » ಮಿತ್ತೂರು : ಹಿಟ್ ಆ್ಯಂಡ್ ರನ್ | ದ್ವಿಚಕ್ರ ವಾಹನ ಸವಾರ ಸಾವು ,ರಸ್ತೆಯಲ್ಲಿ ರಕ್ತದೋಕುಳಿ

ಮಿತ್ತೂರು : ಹಿಟ್ ಆ್ಯಂಡ್ ರನ್ | ದ್ವಿಚಕ್ರ ವಾಹನ ಸವಾರ ಸಾವು ,ರಸ್ತೆಯಲ್ಲಿ ರಕ್ತದೋಕುಳಿ

by Praveen Chennavara
0 comments

ಪುತ್ತೂರು: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಿತ್ತೂರು ಮಸೀದಿ ಸಮೀಪ ರಸ್ತೆ ಅಪಘಾತವೊಂದರಲ್ಲಿ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದ ದ್ವಿಚಕ್ರ ಸವಾರರೋರ್ವರು ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿಮಧ್ಯೆ ಮೃತಪಟ್ಟ ಘಟನೆ ಅ.12 ರಂದು ನಡೆದಿದೆ.

ನಿಡ್ಪಳ್ಳಿ ಗ್ರಾಮದ ವಾಲ್ತಾಜೆ ನಾರಾಯಣ ನಾಯ್ಕ ರವರ ಪುತ್ರ, ರಿಸ್ಕೋ ಟ್ರೇಡಿಂಗ್ ಕಂಪೆನಿಯ ನೌಕರ ಸುರೇಶ್ ನಾಯ್ಕ ಮೃತ ದುರ್ದೈವಿ. ಅ.12ರ ಬೆಳಿಗ್ಗೆ ಸ್ಥಳೀಯ ನಿವಾಸಿಯೋರ್ವರು ಆಟೋ ರಿಕ್ಷಾವೊಂದರಲ್ಲಿ ಮಿತ್ತೂರಿಗೆ ಹಾಲು ತರುತ್ತಿದ್ದವೇಳೆ ಮಿತ್ತೂರು ಮಸೀದಿ ಸಮೀಪದದ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಸಹಿತ ಸುರೇಶ್ ರವರು ಬಿದ್ದಿರುವುದನ್ನು ನೋಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುರೇಶ್ ರವರನ್ನು ಕೂಡಲೇ ದಾರಿಯಾಗಿ ಬಂದ ವಾಹನದ ಮೂಲಕ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.

You may also like

Leave a Comment