Home » Puttur: ಪುತ್ತೂರು; ಶಾಸಕ ಅಶೋಕ್‌ ರೈ ಅಭಿನಂದನಾ ಕಟೌಟ್‌ ಕಳವು

Puttur: ಪುತ್ತೂರು; ಶಾಸಕ ಅಶೋಕ್‌ ರೈ ಅಭಿನಂದನಾ ಕಟೌಟ್‌ ಕಳವು

0 comments

Puttur: ಪರನೀರು ನಿವಾಸಿಗಳು ಶಾಸಕ ಅಶೋಕ್‌ ಕುಮಾರ್‌ ರೈ ಅವರಿಗೆ ಅಭಿನಂದನೆ ಸಲ್ಲಿಸಿ ಕೋಡಿಂಬಾಡಿಯ ಬಾರಿಕೆ ಸಮೀಪದ ಅರ್ಜಿ ಕ್ರಾಸ್‌ ಬಳಿ ಅಳವಡಿಸಿದ್ದ ಕಟೌಟನ್ನು ಕಿಡಿಗೇಡಿಗಳು ಕಳವು ಮಾಡಿರುವ ಕುರಿತು ವರದಿಯಾಗಿದೆ.

ಕೋಡಿಂಬಾಡಿ ಗ್ರಾಮದ ಡೆಕ್ಕಾಜೆ-ಪರನೀರು ರಸ್ತೆ ಕಾಂಕ್ರೀಟೀಕರಣಕ್ಕೆಂದು ಐದು ಲಕ್ಷ ರೂ ಅನುದಾನವನ್ನು ಶಾಸಕ ಅಶೋಕ್‌ ಕುಮಾರ್‌ ರೈ ಒದಗಿಸಿದ್ದು, ಇದಕ್ಕೆ ಅಭಿನಂದನೆ ಸಲ್ಲಿಸುವ ಕಟೌಟನ್ನು ಕೆಲವು ದಿನಗಳ ಹಿಂದೆ ಹಾಕಲಾಗಿತ್ತು. ಇದೀಗ ಫೆ.21 ರಂದು ಪ್ರೇಮ್‌ ಸಹಿತ ಕಟೌಟ್‌ ಕಳವು ಮಾಡಲಾಗಿದೆ.

ಪದ್ಮಪ್ಪ ಪೂಜಾರಿ ಪರನೀರು ಅವರು ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಈ ಕುರಿತು ಫೆ.23 ರಂದು ಪೂಜೆ ಮಾಡಿ ಕಟೌಟ್‌ ಕಳವು ಮಾಡಿರುವವರಿಗೆ ಸರಿಯಾದ ಬುದ್ಧಿ ನೀಡು ಎಂದು ಪ್ರಾರ್ಥನೆ ಮಾಡಿದ್ದಾರೆ.

You may also like