UP: ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಗರಾಜ್‌ನಲ್ಲಿ ನನ್ನಂತಹ ಅನೇಕ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ, ಶೂನ್ಯ ಸಹಿಷ್ಣುತೆಯಂತಹ ನೀತಿಗಳನ್ನು ತರುವ ಮೂಲಕ ಅತೀಕ್ ಅಹ್ಮದ್‌ನಂತಹ ಅಪರಾಧಿಗಳ ಹತ್ಯೆಗೆ ಕಾರಣವಾಗಿದ್ದಾರೆ ಇಂದು ಯೋಗಿಯವರನ್ನು ಹೊಗಳಿದ್ದರು. ಈ ಕಾರಣಕ್ಕಾಗಿ ಇದೀಗ ಸಮಾಜವಾದಿ ಪಕ್ಷ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಿದ
ಹೌದು, ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ತಮ್ಮ ಪತಿ ರಾಜು ಪಾಲ್ ಹತ್ಯೆ ಅಪರಾಧಿಗಳನ್ನು ಯುಪಿ ಸಿಎಂ ಆದಿತ್ಯನಾಥ್ ಎನ್ ಕೌಂಟರ್ ಮಾಡಿದ್ದಾರೆಂದು ಹೊಗಳಿದ ಕೆಲವೇ ಗಂಟೆಗಳ ನಂತರ ಅಖಿಲೇಶ್ ಯಾದವ್ ಈ ನಿರ್ಧಾರ ಪ್ರಕಟಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದ್ದಕ್ಕಾಗಿ ಆದಿತ್ಯನಾಥ್ ಅವರನ್ನು ಪೂಜಾ ಪಾಲ್ ವಿಧಾನಸಭೆ ಅಧಿವೇಶನದಲ್ಲಿ ಹೊಗಳಿದ್ದರು. ಅತಿಕ್ ಅಹ್ಮದ್‌ನಂಥ ಅಪರಾಧಿಗಳನ್ನು ಎನ್ ಕೌಂಟರ್ ಮಾಡುವ ಮೂಲಕ ನನ್ನಂಥ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದ್ದರು. ನನ್ನ ಪತಿಯನ್ನು ಕೊಂದವರು ಯಾರೆಂದು ಎಲ್ಲರಿಗೂ ತಿಳಿದಿದೆ. ಬೇರೆ ಯಾರೂ ನನ್ನ ಮಾತನ್ನು ಕೇಳದೇ ಇದ್ದಾಗ, ಮುಖ್ಯಮಂತ್ರಿಗಳು ನನ್ನ ಮನವಿಯನ್ನು ಆಲಿಸಿ ನನಗೆ ನ್ಯಾಯ ಒದಗಿಸಿದ್ದರು. ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದರು.
ಪೂಜಾ ಪಾಲ್ ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅವರನ್ನು ಪಕ್ಷದಿಂದ ತಕ್ಷಣವೇ ಉಚ್ಚಾಟಿಸುವುದಾಗಿ ಘೋಷಿಸಿದರು. ಪಕ್ಷ ವಿರೋಧಿ ಚಟುವಟಿಕೆ ಮತ್ತು ಗಂಭೀರ ಸ್ವರೂಪದ ಅಶಿಸ್ತಿನ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಖಿಲೇಶ್ ಹೇಳಿದ್ದಾರೆ.
TB Dam: ಓಪನ್ ಆಗುತ್ತಿಲ್ಲ ತುಂಗಭದ್ರಾ ಜಲಾಶಯದ 7 ಕ್ರಸ್ಟ್ ಗೇಟ್ ಗಳು – ಕಾದಿದೆಯಾ ಭಾರಿ ಗಂಡಾಂತರ?
