Home » Mangaluru : ಪಿಕಪ್ ಡಿಕ್ಕಿಯಾಗಿ ಶಾಸಕನ ಸೋದರಳಿಯ ಸಾವು!!

Mangaluru : ಪಿಕಪ್ ಡಿಕ್ಕಿಯಾಗಿ ಶಾಸಕನ ಸೋದರಳಿಯ ಸಾವು!!

0 comments

Mangaluru : ಮಂಗಳೂರಿನಲ್ಲಿ ಪಿಕಪ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಸಿಂಧನೂರು ಶಾಸಕರ ಸೋದರ ಅಳಿಯ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೌದು, ಬೈಕಂಪಾಡಿಯ ಕುಳಾಯಿಯಲ್ಲಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಮೂವರು ಸ್ನೇಹಿತರು ಮತ್ತೂಂದು ಬದಿಯಲ್ಲಿದ್ದ ಹೊಟೇಲ್‌ನಲ್ಲಿ ಮಧ್ಯಾಹ್ನ ಊಟ ಮುಗಿಸಿ ರಸ್ತೆ ದಾಟಲು ಮುಂದಾಗಿದ್ದಾರೆ. 2.45ರ ಸುಮಾರಿಗೆ ಹೊಟೇಲ್‌ ಮುಂಭಾಗದಲ್ಲಿ ಹೆದ್ದಾರಿ ದಾಟಿ ಮತ್ತೂಂದು ಬದಿಗೆ ತೆರಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಪಿಕಪ್‌ ವಾಹನವೊಂದು ಅದೇ ರಸ್ತೆಯಲ್ಲಿ ಆಗಮಿಸುತ್ತಿದ್ದ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರು ಬಡಿದು ಸಿಂಧನೂರು ಶಾಸಕರ ಸೋದರ ಅಳಿಯ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಮಂಗಳೂರು ಹೊರವಲಯದ ಕುಳಾಯಿಯಲ್ಲಿ ಶನಿವಾರ ಸಂಭವಿಸಿದೆ.

ರಾಯಚೂರು ಜಿಲ್ಲೆಯ ಸಿಂದನೂರಿನವರಾದ ದೀಪು ಗೌಡ ಅಲಿಯಾಸ್‌ ಪೊಂಪನ ಗೌಡ (48) ಮೃತರು. ದೀಪು ಗೌಡ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರಿಯ ಪುತ್ರ ಎನ್ನಲಾಗಿದೆ.

ಕಾರು ಢಿಕ್ಕಿಯಾದ ರಭಸಕ್ಕೆ ಪ್ರದೀಪ್‌ ಮತ್ತು ನಾಗರಾಜ್‌ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ದೀಪುಗೌಡ ಅವರು ಕಾರಿನೊಂದಿಗೆ ತಳ್ಳಲ್ಪಟ್ಟು ಲಾರಿಯ ಹಿಂಬದಿಗೆ ಅಪ್ಪಳಿಸಿ ತಲೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿತ್ತು. ತತ್‌ಕ್ಷಣ ನಾಲ್ವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷೆ ನಡೆಸಿದ ವೈದ್ಯರು ದೀಪು ಗೌಡ ಅವರು ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.

You may also like