Home » Puttur: ಪುತ್ತೂರು ಮಿನಿ ವಿಧಾನ ಸೌಧದಲ್ಲಿರುವ ಪ್ರತೀ ಕಚೇರಿಗೂ ಶಾಸಕರು ಭೇಟಿ: ಎಡಿಎಲ್ ಆರ್ ಕಚೇರಿ ಬಂದ್ ಮಾಡಿದ ಅಶೋಕ್ ರೈ?!

Puttur: ಪುತ್ತೂರು ಮಿನಿ ವಿಧಾನ ಸೌಧದಲ್ಲಿರುವ ಪ್ರತೀ ಕಚೇರಿಗೂ ಶಾಸಕರು ಭೇಟಿ: ಎಡಿಎಲ್ ಆರ್ ಕಚೇರಿ ಬಂದ್ ಮಾಡಿದ ಅಶೋಕ್ ರೈ?!

by ಕಾವ್ಯ ವಾಣಿ
0 comments

Puttur: ಪುತ್ತೂರು (Puttur) ತಾಲೂಕು ಕಚೇರಿಯ ಸಿಬಂದಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ, ಕೆಲವೊಂದು ಕಚೇರಿಗೆ ಹಗಲು ವೇಳೆ ಬಾಗಿಲು ಹಾಕಿರುತ್ತಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಶನಿವಾರ ಶಾಸಕ ಅಶೋಕ್ ರೈ ಅವರು ತಾಲೂಕು ಕಚೇರಿಗೆ ಭೇಟಿ ನೀಡಿ ಹಾಜರಾತಿ ಪರಿಶೀಲನೆ ನಡೆಸಿದ್ದಾರೆ.

ಮಿನಿ ವಿಧಾನ ಸೌಧದಲ್ಲಿರುವ ಪ್ರತೀ ಕಚೇರಿಗೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಎಡಿಎಲ್ ಆರ್ ಕಚೇರಿಯಲ್ಲಿ ಯಾರೂ ಇರಲಿಲ್ಲ. ಅಧಿಕಾರಿಯ ಬಗ್ಗೆ ಪರಿಶೀಲನೆ ನಡೆಸಿದ ಶಾಸಕರು ಅಧಿಕಾರಿ ಇಲ್ಲದಿದ್ದರೆ ಕಚೇರಿಯನ್ನು ಯಾಕೆ ಓಪನ್ ಇಟ್ಟಿದ್ದೀರಿ ಬಂದ್ ಮಾಡಿ ಎಂದು ಶಾಸಕರೇ ಕಚೇರಿಯ ಬಾಗಿಲನ್ನು ಮುಚ್ಚಿದರು. ಈ ವೇಳೆ ಓಡೋಡಿ ಬಂದ ಎಡಿಎಲ್‌ಆರ್ ರವರು ನನಗೆ ಕಡಬ ಹೋಗಲಿದ್ದ ಕಾರಣ ಕಚೇರಿಯಲ್ಲಿ ನಾನಿರಲಿಲ್ಲ ಎಂದು ಶಾಸಕರಲ್ಲಿ ತಿಳಿಸಿದರು. ಉಳಿದಂತೆ ಎಲ್ಲಾ ಕಚೇರಿಗಳಲ್ಲೂ ಸಿಬಂದಿಗಳು, ಅಧಿಕಾರಿಗಳು ಹಾಜರಿದ್ದರು.

ನಂತರ ಎಲ್ಲಾ ಅಧಿಕಾರಿಗಳು, ಸಿಬಂದಿಗಳು, ಬೆಳಿಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು. ಇವತ್ತು ಕಚೇರಿಯಲ್ಲಿ ಇಲ್ಲದ ಇಬ್ಬರಿಗೆ ಶೋಕಾಸ್ ನೋಟೀಸ್ ಮಾಡುವಂತೆ ಸೂಚನೆ ನೀಡಿದ್ದೇನೆ, ಸಹಾಯಕ ಕಮಿಷನರ್ ಗೂ ಈ ವಿಚಾರದಲ್ಲಿ ಸೂಚನೆ ನೀಡಿದ್ದೇನೆ, ತಹಶಿಲ್ದಾ‌ರ್ ಗೂ ಸೂಚನೆ ನೀಡಿದ್ದೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

You may also like