Home » ಮೊಬೈಲ್ ಗ್ರಾಹಕರಿಗೆ ಇದ್ದಕ್ಕಿದ್ದಂತೆ ಬಿಎಸ್ಎನ್ಎಲ್ ಮೇಲೆ ಪ್ರೇಮಾಂಕುರ | ಶುರುವಾಗಿದೆ “ಸ್ವಿಚ್ ಟು ಬಿಎಸ್ಎನ್ಎಲ್” ಅಭಿಯಾನ | ಇದಕ್ಕೆ ಕಾರಣ ಈ ಮೂವರಂತೆ!!

ಮೊಬೈಲ್ ಗ್ರಾಹಕರಿಗೆ ಇದ್ದಕ್ಕಿದ್ದಂತೆ ಬಿಎಸ್ಎನ್ಎಲ್ ಮೇಲೆ ಪ್ರೇಮಾಂಕುರ | ಶುರುವಾಗಿದೆ “ಸ್ವಿಚ್ ಟು ಬಿಎಸ್ಎನ್ಎಲ್” ಅಭಿಯಾನ | ಇದಕ್ಕೆ ಕಾರಣ ಈ ಮೂವರಂತೆ!!

by ಹೊಸಕನ್ನಡ
0 comments

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೇಶದ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದು. ಸದ್ಯ ಮಾರುಕಟ್ಟೆಯಲ್ಲಿ ಅಷ್ಟೊಂದು ಪ್ರಬಲ ಕಂಪನಿಯಾಗಿ ಹೊರಹೊಮ್ಮದಿದ್ದರೂ, ತನ್ನದೇ ಆದ ವಿಶಿಷ್ಟ ಹೆಸರನ್ನಂತೂ ಮಾಡಿದೆ.

ಬಿಎಸ್ ಎನ್ಎಲ್ ಎಂದರೆ ‘ಬೋತ್ ಸೈಡ್ ನಾಟ್ ಲಿಸನಿಂಗ್’ ಎಂದು ಮೂಗು ಮುರಿಯುತ್ತಿದ್ದ ಸಾರ್ವಜನಿಕರಲ್ಲಿ ಇದೀಗ ಇದ್ದಕ್ಕಿದ್ದಂತೆ ಬಿಎಸ್ಎನ್ಎಲ್ ಪ್ರೇಮ ಹುಟ್ಟಿಕೊಂಡಿದೆ. ಹೌದು, ಬಿಎಸ್ಎನ್ಎಲ್ ಬಳಕೆಯೇ ಲೇಸು ಎಂದು ಹಲವರು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಯತ್ತ ಒಲವು ತೋರಲಾರಂಭಿಸಿದ್ದಾರೆ. ಅಷ್ಟಕ್ಕೂ ಹೀಗೆ ಜನರಲ್ಲಿ ಇದ್ದಕ್ಕಿದ್ದಂತೆ ಬಿಎಸ್‌ಎನ್‌ಎಲ್‌ನತ್ತ ಒಲವು ಮೂಡಲು ಪ್ರಮುಖ ಕಾರಣ ಆ ಮೂವರು.

ಅವರೇ ಜಿಯೋ, ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಕಂಪನಿಗಳು. ಏರ್‌ಟೆಲ್, ವೊಡಾಫೋನ್ ಐಡಿಯಾ ತನ್ನ ಟ್ಯಾರಿಫ್ ದರದಲ್ಲಿ ಹೆಚ್ಚಳ ಮಾಡಿದ ಬೆನ್ನಿಗೆ ಅತ್ಯಂತ ದೊಡ್ಡ ದೂರಸಂಪರ್ಕ ಜಾಲದಲ್ಲಿ ಒಂದಾಗಿರುವ ಜಿಯೋ ಕಂಪನಿ ಕೂಡ ದರ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.

ಇಂದಿನಿಂದ ಜಿಯೋ ಟ್ಯಾರಿಫ್‌ನಲ್ಲಿ ಶೇ. 20 ಹೆಚ್ಚಳ ಆಗುವುದಾಗಿ ಕಂಪನಿ ಘೋಷಿಸಿದೆ. ಅಂದರೆ 75, 129, 399, 1299, 2399 ರೂ. ಇರುವ ಸದ್ಯದ ಪ್ಲಾನ್‌ಗಳು 91, 155, 479, 1599, 2879 ರೂ. ಆಗಲಿವೆ. ಸರಿಯಾದ ನೆಟ್‌ವರ್ಕ್ ಲಭ್ಯ ಇರದಿದ್ದರೂ, ಟರ್‌ನೆಟ್ ಸ್ಪೀಡ್ ಸಮರ್ಪಕವಾಗಿ ಇರದಿದ್ದರೂ ಏಕಾಏಕಿ ದರ ಹೆಚ್ಚಳದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಾರ್ವಜನಿಕರು ಖಾಸಗೀಕರಣದ ವಿರುದ್ಧವೂ ಬೇಸರ ಹೊರಹಾಕಿದ್ದಾರೆ.

ಮಾತ್ರವಲ್ಲ, ಬಿಎಸ್ಎನ್ಎಲ್ ಟ್ಯಾರಿಫ್ ಜೊತೆ ಹೋಲಿಸಿ ಮಾತನಾಡುತ್ತಿರುವ ನೆಟ್ಟಿಗರು, ಅದರತ್ತ ಒಲವು ತೋರಲಾರಂಭಿಸಿದ್ದಾರೆ. ಅಷ್ಟೇ ಅಲ್ಲ #BoycottJioVodaAirtel ಎನ್ನುವ ಜೊತೆಗೆ ಬಿಎಸ್ಎನ್ ಎಲ್‌ಗೆ ಸ್ವಿಚ್ ಆಗೋಣ ಎಂಬುದಾಗಿ ಅಭಿಯಾನವನ್ನೇ ನಡೆಸುತ್ತಿದ್ದು, #BoycottJioVodaAirtel ಇದೀಗ ಭಾರೀ ಟ್ರೆಂಡಿಂಗ್ ನಲ್ಲಿದೆ.

You may also like

Leave a Comment