Home » Mock Drill: ಕರ್ನಾಟಕ, ದೆಹಲಿ ಸೇರಿ 259 ಸ್ಥಳಗಳಲ್ಲಿ ನಾಳೆ ಮಾಕ್‌ ಡ್ರಿಲ್! ‌

Mock Drill: ಕರ್ನಾಟಕ, ದೆಹಲಿ ಸೇರಿ 259 ಸ್ಥಳಗಳಲ್ಲಿ ನಾಳೆ ಮಾಕ್‌ ಡ್ರಿಲ್! ‌

0 comments

Mock Drill: ಕೇಂದ್ರ ಗೃಹ ಸಚಿವಾಲಯ ನಾಳೆ (ಮೇ.7) ಮಾಕ್‌ ಡ್ರಿಲ್‌ ನಡೆಸುವಂತೆ ರಾಜ್ಯಗಳಿಗೆ ಸೂಚನೆ ನೀಡಿತ್ತು. ನಾಳೆ ಭಾರತದ 259 ಸ್ಥಳಗಳಲ್ಲಿ ನಾಗರಿಕ ರಕ್ಷಣಾ ಡ್ರಿಲ್‌ ನಡೆಯಲಿದೆ. ಈ ಅಣುಕು ಡ್ರಿಲ್‌ನಲ್ಲಿ ವಾಯುದಾಳಿ ಸೈರನ್‌ಗಳು, ಬ್ಲ್ಯಾಕ್‌ಔಟ್‌ ಪ್ರೋಟೋಕಾಲ್‌ಗಳು, ಸಾರ್ವಜನಿಕ ತರಬೇತಿ ನಡೆಯಲಿದ್ದು ಅಧಿಕಾರಿಗಳು ಟಾರ್ಚ್‌ಗಳು, ಮೇಣದಬತ್ತಿಗಳು ಮತ್ತು ಹಣವನ್ನು ಸಿದ್ಧವಾಗಿಟ್ಟುಕೊಳ್ಳಲು ನಾಗರಿಕರಿಗೆ ಸೂಚಿಸಿದ್ದಾರೆ.

ಬುಧವಾರ ನಡೆಯಲಿರುವ ರಾಷ್ಟ್ರವ್ಯಾಪಿ ಅಣಕು ಡ್ರಿಲ್‌ನಲ್ಲಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 259 ಜಿಲ್ಲೆಗಳು ಭಾಗವಹಿಸಲಿದೆ. ಕರ್ನಾಟಕದ ಬೆಂಗಳೂರು ನಗರ, ಮಲ್ಲೇಶ್ವರ, ರಾಯಚೂರು ಕೂಡ ಸೇರಿವೆ. ಹಾಗೇ, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಂತಹ ಗಡಿ ರಾಜ್ಯಗಳಲ್ಲಿ ನೆಲೆಗೊಂಡಿರುವ ಜಿಲ್ಲೆಗಳಿಗೆ ಬಹು-ಅಪಾಯದ ಸನ್ನಿವೇಶಗಳನ್ನು ಅನುಕರಿಸುವ ಡ್ರಿಲ್ ಅನ್ನು ನಡೆಸಲು ಸೂಚನೆ ನೀಡಲಾಗಿದೆ. ದೆಹಲಿ, ಚೆನ್ನೈ, ಮುಂಬೈ, ಬೆಂಗಳೂರು, ಅಹಮದಾಬಾದ್ ಮುಂತಾದ ಮೆಟ್ರೋ ಸಿಟಿಗಳಲ್ಲೂ ಮಾಕ್ ಡ್ರಿಲ್ ನಡೆಯಲಿದೆ.

ನಾಳೆ ಯಾವೆಲ್ಲ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ ಎಂಬ ಪಟ್ಟಿ ಇಲ್ಲಿದೆ.

You may also like