Home » Model Arrest: ಮಾಡೆಲ್, ನಟಿ ಮೇಘನಾ ಆಲಮ್ ಬಂಧನ!

Model Arrest: ಮಾಡೆಲ್, ನಟಿ ಮೇಘನಾ ಆಲಮ್ ಬಂಧನ!

0 comments

Model Arrest: ಬಾಂಗ್ಲಾದೇಶದ ಖ್ಯಾತ ಮಾಡೆಲ್ ಹಾಗೂ ನಟಿ ಮೇಘನಾ ಆಲಮ್‌ಳನ್ನ ಢಾಕಾ ಪೊಲೀಸರು ಬಂಧನ ಮಾಡಿದ್ದಾರೆ. ಸ್ಪೆಷಲ್ ಪವರ್ಸ್ ಆ್ಯಕ್ಟರ್ ಪ್ರಕಾರ ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿದೇಶಿ ರಾಜತಾಂತ್ರಿಕರೊಬ್ಬರೊಂದಿಗೆ ಸಂಬಂಧ ಹೊಂದಿದ್ದಳು ಎನ್ನುವ ಶಂಕೆ ವ್ಯಕ್ತವಾಗಿದೆ.

ಸೌದಿ ಅರೇಬಿಯಾದ ರಾಜತಾಂತ್ರಿಕನೊಂದಿಗೆ ಮೇಘನಾಗೆ ಸಂಬಂಧವಿತ್ತು. ಮದುವೆ ಆಗಿದ್ದ ರಾಜತಾಂತ್ರಿಕನೊಂದಿಗೆ ಪ್ರೀತಿ ಸಲುಗೆ ಇದೆ ಅನ್ನೋದನ್ನ ಖುದ್ದು ಮೇಘನಾ ಫೇಸ್‌ಬುಕ್ ಪೋಸ್ಟ್ ಮೂಲಕ ಹೇಳಿಕೊಂಡಿದ್ದಳು. ಆತ ತನಗೆ ಮೋಸ ಮಾಡಲು ಪ್ರಯತ್ನಿಸಿದ್ದ ಎಂದು ಆರೋಪಿಸಿದ್ದಳು.

ಆರಂಭದಲ್ಲಿ ಮೇಘನಾಳನ್ನ ಕಿಡ್ನಾಪ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಮೇಘನಾಳನ್ನ ಆಕೆಯ ಮನೆಯಲ್ಲೇ ಪೊಲೀಸರು ಬಂಧಿಸಿರೋ 12 ನಿಮಿಷಗಳ ವಿಡಿಯೋ ಕೂಡ ಲೈವ್ ಆಗಿತ್ತು. ಹಾಗಾಗಿಯೇ ಪೊಲೀಸರು ಅಧಿಕೃತವಾಗಿ ಅರೆಸ್ಟ್ ಮಾಹಿತಿಯನ್ನು ನೀಡಿದ್ದಾರೆ. ಕಾನೂನಿನ ಪ್ರಕಾರವೇ ಮೇಘನಾಳನ್ನ ಬಂಧಿಸಲಾಗಿದೆ. ಆಕೆಯನ್ನ ಖಾಸಿಂಪುರ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ ಎಂದಿದ್ದಾರೆ.

You may also like