Home » ಸ್ವಾತಂತ್ರ್ಯೋತ್ಸವದ ಭಾಷಣಕ್ಕೆ ಇಡೀ ದೇಶ ವಾಸಿಗಳಿಂದ ಸಲಹೆ ಕೇಳಿದ ಪ್ರಧಾನಿ ನರೇಂದ್ರ ಮೋದಿ | ನೀವೂ ಕೂಡ ಈ ಮೂಲಕ ಸಲಹೆ ನೀಡಬಹುದು…!

ಸ್ವಾತಂತ್ರ್ಯೋತ್ಸವದ ಭಾಷಣಕ್ಕೆ ಇಡೀ ದೇಶ ವಾಸಿಗಳಿಂದ ಸಲಹೆ ಕೇಳಿದ ಪ್ರಧಾನಿ ನರೇಂದ್ರ ಮೋದಿ | ನೀವೂ ಕೂಡ ಈ ಮೂಲಕ ಸಲಹೆ ನೀಡಬಹುದು…!

by ಹೊಸಕನ್ನಡ
0 comments

ಆಗಸ್ಚ್ 15ರಂದು ನಡೆಯಲಿರುವ 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಮ್ಮ ಭಾಷಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರಿಂದ ಸಲಹೆ ಕೇಳಿದ್ದಾರೆ.

‘ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕಾಗಿ ನಿಮ್ಮ ಆಲೋಚನೆಗಳು ಮತ್ತು ವಿಚಾರಗಳನ್ನು ಹಂಚಿಕೊಳ್ಳಿ. ನಿಮ್ಮ ಸಲಹೆಗಳು ಕೆಂಪು ಕೋಟೆಯ ಗೋಡೆಗಳ ಮೇಲಿಂದ ಇಡೀ ದೇಶಕ್ಕೇ ಪ್ರತಿಧ್ವನಿಸುತ್ತವೆ’ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.

ಪ್ರಧಾನ ಮಂತ್ರಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ದೇಶಕ್ಕೆ ತಿಳಿಸಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ಮೋದಿ ನಾಗರಿಕರಿಂದ ವಿಚಾರಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸುತ್ತಿದ್ದಾರೆ. ಈ ಬಾರಿಯೂ ಕೂಡ ಅವರು ಸಾರ್ವಜನಿಕರಿಂದ ಸಲಹೆ ಕೇಳಿದ್ದಾರೆ.

ನವ ಭಾರತಕ್ಕಾಗಿ ತಮ್ಮ ಕೊಡುಗೆಗಳನ್ನು ನೀಡಲು ನಾಗರಿಕರನ್ನು ಆಹ್ವಾನಿಸಿದ್ದಾರೆ. ಆದ್ದರಿಂದ, ಈಗ ನಿಮ್ಮ ಆಲೋಚನೆಗಳನ್ನು ಹೇಳಲು, ನಿಮ್ಮ ಸಲಹೆಗಳಿಗೆ ಪದಗಳನ್ನು ನೀಡಲು ಮತ್ತು ನಿಮ್ಮ ದೃಷ್ಟಿಯನ್ನು ಜನರಿಗೆ ತಿಳಿಸಲು ನಿಮಗೆ ಅವಕಾಶವಿದೆ ಎಂದು ಪ್ರಧಾನಿ ಸಚಿವಾಲಯ ಹೇಳಿದೆ.

ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು MyGov ವೆಬ್‍ಸೈಟ್‍ನಲ್ಲಿ ಹಂಚಿಕೊಳ್ಳಬಹುದಾಗಿದೆ.

You may also like

Leave a Comment