Gujarath : ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಗುಜರಾತಿನ ವಡೋದರಾದಲ್ಲಿ ರೋಡ್ ಶೋ ನಡೆಸಿ ರಾಜ್ಯ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಕಿದ್ದ ವೇದಿಕೆಯ ಬೋರ್ಡ್ ಇದೀಗ ದಕ್ಷಿಣ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೋರ್ಡ್ ನೋಡಿದ ದಕ್ಷಿಣ ಭಾರತೀಯರು ‘ಮೋದಿ ನಿಮ್ಮ ಡಬಲ್ ಗೇಮ್ ಬೇಡ’ ಎಂದು ಕುಟುಕಿದ್ದಾರೆ.
ಇದೇನ್ ಆಟ ಗುರು
ಅವರ ಊರಲ್ಲಿ ಅವರ ನುಡಿ
ನಮ್ಮ ಊರಲ್ಲಿ ಹಿಂದಿ ನುಡಿಎಂತೆಂಥ ನನ್ ಮಕ್ಕಳು ಇರುತ್ತಾರೆ https://t.co/sOcAiDEKom
— Nuthan || ನೂತನ (@KannadigaSpeaks) May 26, 2025
ಹೌದು, ಗುಜರಾತಿನ ಸರ್ಕಾರ ಆಯೋಜಿಸಿದ್ದ, ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆ ಹಾಗೂ ಇತರೆ ಯಾವುದೇ ಬೋರ್ಡ್‌ನಲ್ಲಿಯೂ ಹಿಂದಿಯ ಒಂದಕ್ಷರವೂ ಕಾಣ ಸಿಗಲಿಲ್ಲ. ಎಲ್ಲವೂ ಸ್ಥಳೀಯ ಭಾಷೆ ಗುಜರಾತಿನಲ್ಲಿತ್ತು. ಇದೇ ಮೋದಿ ರಾಜ್ಯಕ್ಕೆ ಪ್ರವಾಸ ಬಂದಾಗ ಇದು ಅಕ್ಷರಶಃ ಉಲ್ಟಾ. ಎಲ್ಲಿ ನೋಡಿದರೂ ಹಿಂದಿ ಬೋರ್ಡ್ ರಾರಾಜಿಸುತ್ತಿರುತ್ತವೆ. ತಮ್ಮ ಸ್ವಂತ ನೆಲದಲ್ಲಿ ಆದರೆ ಸ್ಥಳೀಯ ಭಾಷೆಗೆ ಮನ್ನಣೆ, ಬೇರೆ ರಾಜ್ಯಗಳಲ್ಲಿ ಆದರೆ ಹಿಂದಿ ಭಾಷೆಗೆ ಏಕೆ ಮನ್ನಣೆ ಎಂದು ದಕ್ಷಿಣ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಕಾರಣಕ್ಕೆ ವಿಪರೀತವಾಗಿ ಕನ್ನಡದ ನೆಟ್ಟಿಗರು ಪ್ರಧಾನಮಂತ್ರಿಯವರೇ ಹಿಂದಿ ಹೇರಿಕೆ ಬೇಡ ದಕ್ಷಿಣ ಭಾರತಕ್ಕೆ ಪ್ರವಾಸ ಕೈಗೊಂಡಾಗ ಗುಜರಾತ್ ರೀತಿ ಸ್ಥಳೀಯ ಭಾಷೆಗಳನ್ನೇ ಬಳಸಿ ಹಿಂದಿ ಬೇಡ ಎಂದಿದ್ದಾರೆ.
