Home » Gujarath : ಗುಜರಾತ್ ನಲ್ಲಿ ಮೋದಿ ರೋಡ್ ಶೋ – ಹೂ ಸುರಿಯಲು ಕರ್ನಲ್‌ ಸೋಫಿಯಾ ಕುಟುಂಬದವರಿಗೆ ಫೋನ್ ಮಾಡಿ ಕರೆಸಿದ ಜಿಲ್ಲಾಧಿಕಾರಿ : ಇದೆಂಥಾ ಶೋಕಿ?

Gujarath : ಗುಜರಾತ್ ನಲ್ಲಿ ಮೋದಿ ರೋಡ್ ಶೋ – ಹೂ ಸುರಿಯಲು ಕರ್ನಲ್‌ ಸೋಫಿಯಾ ಕುಟುಂಬದವರಿಗೆ ಫೋನ್ ಮಾಡಿ ಕರೆಸಿದ ಜಿಲ್ಲಾಧಿಕಾರಿ : ಇದೆಂಥಾ ಶೋಕಿ?

0 comments

Gujarath : ಪಾಕಿಸ್ತಾನದ ವಿರುದ್ದ ನಡೆದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದು ಭಾರತೀಯ ಸೇನಾ ಪಡೆಯ ಕರ್ನಲ್‌ ಸೋಫಿಯಾ ಖುರೇಷಿ ಅವರು. ಇದೀಗ ಈ ಖುರೇಷಿ ಕುಟುಂಬದ ಸದಸ್ಯರು ಗುಜರಾತ್‌ನ ವಡೋದರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೋದಿ ಅವರ ಮೇಲೆ ಹೂವಿನ ಸುರಿಮಳೆಗೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿದೆ.

ಹೌದು, ಗುಜರಾತ್ ನ ರೋಡ್‌ಶೋನಲ್ಲಿ ಆಪರೇಷನ್‌ ಸಿಂದೂರ್‌ನ ಪ್ರಮುಖ ಸದಸ್ಯೆ ಕರ್ನಲ್‌ ಸೋಫಿಯಾ ಖುರೇಷಿ ಅವರ ಕುಟುಂಬ ಸದಸ್ಯರೂ ಸಹ ಪಾಲ್ಗೊಂಡಿದ್ದರು. ಸೋಫಿಯಾ ಖುರೇಷಿ ಅವರ ಅವಳಿ ಸಹೋದರಿ ಶೈನಾ ಸುನ್ಸಾರಾ ಸಹ ಈ ರೋಡ್‌ಶೋನಲ್ಲಿ ಭಾಗವಹಿಸಿ ಮೇಲೆ ಹೂ ಮಳೆ ಸುರಿಸಿದ್ದಾರೆ. ಇದೀಗ ಮೋದಿ ರೋಡ್ ಶೋಗೆ ಹೂ ಮಳೆ ಸುರಿಸಲು ಸೋಫಿಯಾ ಖುರೇಶಿ ಅವರ ಕುಟುಂಬದವರನ್ನು ಬಳಸಿಕೊಳ್ಳಲಾಗಿದೆ. ಇದು ಎಂಥ ಶೋಕಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಫೋಟೊವನ್ನು ನರೇಂದ್ರ ಮೋದಿ ಸಹ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಸೋಫಿಯಾ ಕುಟುಂಬ ನಿರೀಕ್ಷೆಯಂತೆ ಸಂತಸವಾಗಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಕಾರಣ ಸೋಫಿಯಾ ಕುಟುಂಬದವರನ್ನು ಸ್ಥಳೀಯ ಜಿಲ್ಲಾಧಿಕಾರಿ ಕರೆ ಮಾಡಿ ಸೋಫಿಯಾ ಕುಟುಂಬವನ್ನು ಸಂಪರ್ಕಿಸಿ ಆಹ್ವಾನಿಸಿ ಕರೆಸಲಾಗಿದೆ ಎಂಬುದು.

ಯಸ್, ಇಂಡಿಯಾ ಟುಡೇ ಜೊತೆ ಮಾತನಾಡುವಾಗ ಈ ವಿಷಯದ ಬಗ್ಗೆ ಪ್ರಶ್ನೆ ಎದುರಾದಾಗ ಕಲೆಕ್ಟರ್‌ ಕರೆ ಮಾಡಿ ಬರಲು ಹೇಳಿದರು ಎಂದು ಶೈನಾ ಸುನ್ಸಾರಾ ತಿಳಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ದೇಶಕ್ಕಾಗಿ ಹೋರಾಡುವ ಸೈನಿಕರ ಕುಟುಂಬದ ಸದಸ್ಯರನ್ನು ತನ್ನ ಮೇಲೆ ಹೂ ಸುರಿಯಲು ಕರೆಸಿಕೊಳ್ಳುವುದು ಎಂಥ ಶೋಕಿ ಎಂದು ಕಿಡಿಕಾರಿದ್ದಾರೆ. ಇಂಥ ಕೆಲಸ ಮಾಡಿದ ಕಲೆಕ್ಟರ್‌ಗೆ ನಾಚಿಕೆಯಾಗಬೇಕು ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

You may also like