5
ಇಸ್ಲಾಮಾಬಾದ್: ಪಹಲ್ಗಾಂ ನರಮೇಧ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ಜೊತೆ ಹಸ್ತಲಾಘವ ಮಾಡದಿರುವ ಬಿಸಿಸಿಐ ನಿರ್ಧಾರ ಮಾಡಿರುವುದರ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಹಾಗೂ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಪ್ರತಿಕ್ರಿಯೆ ನೀಡಿದ್ದು, ನಾವೇನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ಹ್ಯಾಂಡ್ ಶೇಕ್ ಮಾಡದಿರಲು ಬಯಸಿದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರ ಜೊತೆ ಕೈ ಕುಲುಕುವುದಕ್ಕೆ ನಮಗೂ ಆಸಕ್ತಿಯಿಲ್ಲ. ಭಾರತ ನೋ ಹ್ಯಾಂಡ್‌ಶೇಕ್ ಮುಂದುವರೆಸಿದರೆ ನಾವು ಕೂಡಾ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳಿದ್ದಾರೆ.
