Home » Mokshita Pai: ಬಿಗ್ ಬಾಸ್ ಖ್ಯಾತಿಯ ಮೋಕ್ಷಿತ ಪೈ ‘ಆ’ ವಿಡಿಯೋ ವೈರಲ್ !!

Mokshita Pai: ಬಿಗ್ ಬಾಸ್ ಖ್ಯಾತಿಯ ಮೋಕ್ಷಿತ ಪೈ ‘ಆ’ ವಿಡಿಯೋ ವೈರಲ್ !!

0 comments

Mokshita Pai: ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯಗೊಂಡಿದೆ. ಹನುಮಂತು ಅವರು ವಿನ್ನರ್ ಆಗಿ ಹೊರ ಬಂದಿದ್ದಾರೆ. ಇನ್ನು ಮೋಕ್ಷಿತಾ ಪೈ ಬಿಗ್‌ಬಾಸ್‌ನ ಎಲ್ಲಾ ಸ್ಪರ್ಧಿಗಳಲ್ಲಿ ಟ್ರೋಫಿಗೆ ಹತ್ತಿರವಾಗಿದ್ದ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ. ಅಂದ ಹಾಗೆ ಮೋಕ್ಷಿತ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದಂತಹ ಸಂದರ್ಭದಲ್ಲಿ ಇತ್ತ ಹೊರಗೆ ಅವರು ಮಕ್ಕಳು ಕಿಡ್ನಾಪ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ರು ಎಂಬ ಆರೋಪ ಬೆಳಕಿಗೆ ಬಂದಿತ್ತು. ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಮೋಕ್ಷಿತ ಅವರು ಈ ಕುರಿತಂತೆ ಸ್ಪಷ್ಟೀಕರಣ ಕೂಡ ನೀಡಿದ್ದರು. ಈ ಬೆನ್ನಲ್ಲೇ ಇದೀಗ ಮೋಕ್ಷಿತ ಅವರ ವಿಡಿಯೋ ಒಂದು ವೈರಲ್ ಆಗಿದೆ.

ಹೌದು, ಹೊರಗಡೆ ಬಂದ ಬಳಿಕ ಟೀಕೆ, ಆರೋಪ ಮಾಡಿದವರಿಗೆ ಸ್ಪಷ್ಟನೆ ನೀಡುವ ಮೂಲಕ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದರು. ಇದರ ಬೆನ್ನಲ್ಲೇ ಅವರ ಭಾವನಾತ್ಮಕ, ಸರಳತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅಂದಹಾಗೆ ಮೋಕ್ಷಿತಾ ಪೈ ಮುಗ್ಧ ಮನಸ್ಸಿನ ಮಕ್ಕಳ ಜೊತೆ ಬೆರೆತು ಕಾಲ ಕಳೆದಿದ್ದಾರೆ. ವಿಶೇಷ ಚೇತನ ಮಕ್ಕಳನ್ನು ಭೇಟಿ ಮಾಡಿರುವ ಮೋಕ್ಷಿತಾ ಅವರು ಆ ವಿಡಿಯೋವನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮುಗ್ಧ ಮನಸ್ಸಿನ ಮಕ್ಕಳು ದೇವರ ಸಮಾನ. ಅಂತ ಮಕ್ಕಳು ನನ್ನನ್ನು ಇಷ್ಟ ಪಡ್ತಾ ಇರೋದು ನನ್ನ ಪುಣ್ಯ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಹಾರ್ಟ್‌ ಸಿಂಬಲ್‌ ಇಟ್ಟು ಮಕ್ಕಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

You may also like