Viral Post : ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು ಎಲ್ಲಾ ಮನೆಗಳಲ್ಲಿಯೂ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ಅಮ್ಮನ ಅಥವಾ ಅತ್ತೆಯ ಮಾರ್ಗದರ್ಶನದಲ್ಲಿ ಕ್ಲೀನಿಂಗ್ ಕಾರ್ಯವನ್ನು ಮನೆಯ ಹೆಣ್ಣು ಮಕ್ಕಳ ಶುರು ಮಾಡಿದ್ದಾರೆ. ಅಂತೆಯೇ ಇಲ್ಲೊಂದೆಡೆ ದೀಪಾವಳಿಗೆಂದು ಮನೆ ಕ್ಲೀನ್ ಮಾಡುತ್ತಿದ್ದ ವೇಳೆ ಅಮ್ಮನಿಗೆ ಬಂಡಲ್ ಗಟ್ಟಲೆ ಎರಡು ಸಾವಿರ ರೂಪಾಯಿಗಳ ನೋಟಿನ ಕಂತೆ ಸಿಕ್ಕಿದೆ. ಇದನ್ನು ಕಂಡು ಆ ಮಹಿಳೆಗೆ ದುಃಖ, ಸಂತೋಷ ಎಲ್ಲವೂ ಒಟ್ಟೊಟ್ಟಿಗೆ ಆಗಿದೆ.
ಹೌದು, ಮಹಿಳೆಯೊಬ್ಬಳಿಗೆ ಮನೆ ಕ್ಲೀನಿಂಗ್ ವೇಳೆ 2 ಹಳೆಯ ಡಿಟಿಹೆಚ್ ಪಿಆರ್ ಸೆಟ್-ಟಾಪ್ ಬಾಕ್ಸ್‌ನ್ನು ತೆರವುಗೊಳಿಸುತ್ತಿರುವಾಗ ಅವರ ತಾಯಿಗೆ 2 ಲಕ್ಷ ರೂಪಾಯಿ ಹಳೆಯ ನೋಟುಗಳು ಸಿಕ್ಕಿದ್ದು, ಇದು ಕುಟುಂಬವನ್ನು ಆಘಾತಕ್ಕೀಡು ಮಾಡಿದೆ. ಏಕೆಂದರೆ 2023ರಲ್ಲಿಯೇ ಈ ನೋಟುಗಳನ್ನು ಬ್ಯಾನ್ ಮಾಡಲಾಗಿದೆ. ಈಗ ಈ ಪರಿಯ ಕಂತೆ ಕಂತೆ ನೋಟುಗಳು ಸಿಕ್ಕರು ಕೂಡ ಏನೂ ಪ್ರಯೋಜನವಿಲ್ಲದಂತಾಗಿದೆ.
ಅಂದಹಾಗೆ 2025 ರ ಅತಿದೊಡ್ಡ ದೀಪಾವಳಿ ಸ್ವಚ್ಛತೆ ಎಂಬ ಶೀರ್ಷಿಕೆಯ ಪೋಸ್ಟ್‌ನಲ್ಲಿ ರೆಡ್ಡಿಟರ್ ಆನ್‌ಲೈನ್‌ನಲ್ಲಿ ಅನುಭವವನ್ನು ಹಂಚಿಕೊಂಡಿದ್ದು, ದೀಪಾವಳಿ ಸಫಾಯಿ ಸಮಯದಲ್ಲಿ, ನನ್ನ ತಾಯಿಗೆ 2 ಲಕ್ಷ ರೂಪಾಯಿ ಮೌಲ್ಯದ ಹಳೆಯ 2000 ರೂಪಾಯಿ ನೋಟುಗಳು ಸಿಕ್ಕಿತು. ಅದನ್ನು ಹಳೆಯ ಡಿಟಿಗಹೆಚ್ ಪೆಟ್ಟಿಗೆಯೊಳಗೆ ಮುಚ್ಚಿಡಲಾಗಿತ್ತು., ಬಹುಶಃ ನೋಟು ರದ್ದತಿಯ ಸಮಯದಲ್ಲಿ ನನ್ನ ತಂದೆ ಅಲ್ಲಿ ಇಟ್ಟಿರಬಹುದು. ನಾವು ಈ ವಿಚಾರವನ್ನು ಅವರಿಗೆ ಇನ್ನೂ ಹೇಳಿಲ್ಲ. ಇದನ್ನು ಏನು ಮಾಡಬಹುದು ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ ಎಂದು ಬರೆದು 2 ಸಾವಿರ ರೂಪಾಯಿ ನೋಟುಗಳ ಬಂಡಲ್ ಫೋಟೋಗಳನ್ನು ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಈ ಪೋಸ್ಟ್ ಗೆ ಬಗೆ ಬಗೆಯಾಗಿ ಕಮೆಂಟ್ಗಳು ಬಂದಿದ್ದು ಅನೇಕರು ನಾನಾ ರೀತಿಯ ಸಲಹೆಗಳನ್ನು ನೀಡಿದ್ದಾರೆ.
