Home » ಬೈಕ್ ನಲ್ಲಿಟ್ಟಿದ್ದ 3 ಲಕ್ಷ ರೂ. ಹಣದ ಗಂಟನ್ನೇ ಎತ್ತಿಕೊಂಡು ಹೋಗಿ ಮರ ಏರಿ ಕುಳಿತ ಮಂಗ | ಹಣ ವಾಪಸ್ಸು ಪಡೆಯಲು ಪಟ್ಟ ಪಾಡು ಮಾತ್ರ ಅಷ್ಟಿಷ್ಟಲ್ಲ

ಬೈಕ್ ನಲ್ಲಿಟ್ಟಿದ್ದ 3 ಲಕ್ಷ ರೂ. ಹಣದ ಗಂಟನ್ನೇ ಎತ್ತಿಕೊಂಡು ಹೋಗಿ ಮರ ಏರಿ ಕುಳಿತ ಮಂಗ | ಹಣ ವಾಪಸ್ಸು ಪಡೆಯಲು ಪಟ್ಟ ಪಾಡು ಮಾತ್ರ ಅಷ್ಟಿಷ್ಟಲ್ಲ

by ಹೊಸಕನ್ನಡ
0 comments

ಕೈಯಲ್ಲಿರುವ ತಿಂಡಿ ತಿನಿಸುಗಳನ್ನು ಕಸಿದುಕೊಂಡು ಹೋಗುವ ಮಂಗಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಅದರ ಸ್ವಂತ ಅನುಭವ ಕೂಡ ಆಗಿರಬಹುದು. ಆದರೆ, ಉತ್ತರ ಪ್ರದೇಶದ ಹದರ್ದೋಯಿಯಲ್ಲಿ ಮಂಗವೊಂದು ಬರೋಬ್ಬರಿ 3 ಲಕ್ಷ ರೂ. ಹಣದ ಗಂಟನ್ನೇ ಎತ್ತಿಕೊಂಡು ಹೋದ ಘಟನೆ ನಡೆದಿದೆ.

ಇಲ್ಲಿನ ಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿದ್ದ ಬೈಕ್‌ನಲ್ಲಿ ಮೂರು ಲಕ್ಷ ರೂಪಾಯಿ ಇದ್ದ ಬ್ಯಾಗನ್ನು ಯುವಕ ಇಟ್ಟಿದ್ದ. ಹಣದ ಬ್ಯಾಗನ್ನು ಪೊಲೀಸ್ ಸ್ಟೇಷನ್‌ನೊಳಗೆ ಕೊಂಡೊಯ್ದರೆ ಪೊಲೀಸರು ಕಸಿದುಕೊಳ್ಳಬಹುದು ಎಂಬ ಭಯವಿತ್ತೋ ಏನೋ ಅಥವಾ ಹಣವನ್ನು ಹಾಗೆಯೇ ದಾಖಲೆ ಇಲ್ಲದೆ ಸಾಗಿಸುವ ಆತನ ಉದ್ದೇಶ ಏನಿತ್ತೋ ಗೊತ್ತಿಲ್ಲ. ಒಟ್ಟಾರೆಯಾಗಿ ಬೈಕ್‌ನಲ್ಲಿಯೇ ಆ ಹಣವನ್ನು ಬಿಟ್ಟು ಹೋಗಿದ್ದ.

ಈತನ ಬೈಕ್‌ನಲ್ಲಿದ್ದ ಗಂಟನ್ನು ಅಲ್ಲೇ ಮರದಲ್ಲಿದ್ದ ಮಂಗ ನೋಡಿದೆ. ಯಾವುದೋ ತಿನ್ನುವ ಆಹಾರ ಇರಬಹುದು ಎಂದುಕೊಂಡು ನೇರ ಬ್ಯಾಗ್ ಎತ್ತಿಕೊಂಡು ಮರದ ಮೇಲೆ ಹೋಗಿ ಕುಳಿತಿದೆ.

ಯುವಕ ಕೆಲಸ ಮುಗಿಸಿ ವಾಪಸ್ ಬಂದಾಗ ಬ್ಯಾಗ್ ಇರಲಿಲ್ಲ. ನಂತರ ಜನರೆಲ್ಲ ಸೇರಿ ಏನೇನೋ ಪಾಡು ಪಟ್ಟು ಹೇಗೋ ಅರ್ಧ ಗಂಟೆಯ ನಂತರ ಮಂಗನ ಕೈಯಿಂದ ಬ್ಯಾಗ್ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಇತ್ತ ಕಡೆ ಅಷ್ಟು ದುಡ್ಡು ಇದ್ದದ್ದನ್ನು ಕಂಡು ಸಂಶಯಗೊಂಡ ಪೊಲೀಸರ ಕೈಗೆ ಮಾತ್ರ ಆತ ಸಿಕ್ಕಿಹಾಕಿಕೊಂಡಿದ್ದಾನೆ. ಮಂಗ ಮಾಡಿದ ಚೇಷ್ಟೆಗೆ ಆತ ಈಗ ಜೈಲು ಪಾಲಾಗೋ ಹಾಗಾಗಿದೆ.

You may also like

Leave a Comment