ಬೆಂಗಳೂರು: ಮಂಗನ ಕಾಯಿಲೆ ಭೀತಿಯನ್ನು ಕಡಿಮೆ ಮಾಡಲು, ಕಾಯಿಲೆಯನ್ನು ಗುರುತಿಸಲು ಹಾಗೂ ಸಾವಿನ ಪ್ರಮಾಣ ಶೂನ್ಯಕ್ಕೆ ತರಲು ಆರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ.
ಪ್ರತಿ ವರ್ಷ ಅಕ್ಟೋಬರ್‌ನಿಂದ ಜೂನ್‌ವರೆಗೆ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಕಂಡು ಬರುತ್ತದೆ.
ಕಳೆದ ವರ್ಷ ಮಂಗನ ಕಾಯಿಲೆಯಿಂದ 8 ಜನರು ಸಾವನ್ನಪ್ಪಿದ್ದರು. ಹಾಗಾಗಿ ಈ ವರ್ಷ ಒಬ್ಬರೂ ಮೃತ ಪಡಬಾರದು ಎನ್ನುವುದು ನಮ್ಮ ಉದ್ದೇಶವಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಚರ್ಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿರುವುದಾಗಿ ವರದಿಯಾಗಿದೆ.
ಶಿವಮೊಗ್ಗದಲ್ಲಿಯೇ 12 ಜನರಲ್ಲಿ ಈ ರೋಗ ಕಂಡು ಬಂದಿದೆ. ಒಂದೇ ಗ್ರಾಮದ 10 ಜನರಿಗೆ ಮಂಗನ ಕಾಯಿಗೆ ಇರುವುದು ಗೊತ್ತಾಗಿದೆ. ಚಿಕ್ಕಮಗಳೂರಿನಲ್ಲಿ ಒಬ್ಬರಲ್ಲಿ ಕಂಡು ಬಂದಿದೆ. ಈ ರೋಗದಿಂದ
ಬಳಲುತ್ತಿರುವವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ವ್ಯಾಕ್ಸಿನ್ ಕುರಿತು ಕೇಂದ್ರ ಸರಕಾರದ ಸಂಪರ್ಕದಲ್ಲಿದ್ದು, ಹೊಸ ವ್ಯಾಕ್ಸಿನ್‌ನ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಮುಂದಿನ ವರ್ಷದೊಳಗೆ ಅದು ಬಳಕೆಗೆ ಲಭ್ಯ ಆಗಬಹುದು ಎಂದು ಸಚಿವರು ತಿಳಿಸಿದ್ದಾರೆ.
