Home » Monkey Snatches Purse: ಮಹಿಳೆಯ ಕೈಯಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣದ ಪರ್ಸನ್ನು ಕಸಿದು ಪರಾರಿಯಾದ ಮಂಗ

Monkey Snatches Purse: ಮಹಿಳೆಯ ಕೈಯಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣದ ಪರ್ಸನ್ನು ಕಸಿದು ಪರಾರಿಯಾದ ಮಂಗ

by Mallika
0 comments

Monkey Snatches Purse: ಭಕ್ತರೋರ್ವರ ಕೈಯಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹೊಂದಿದ್ದ ಪರ್ಸನ್ನು ಮಂಗವೊಂದು ಕಸಿದು ಪರಾರಿಯಾಗಿರುವ ಘಟನೆ ಮಥುರಾ ಸಮೀಪದ ಠಾಕೂರ್‌ ಬಂಕೆ ಬಿಹಾರಿ ದೇವಸ್ಥಾನದ ಬೃಂದಾವನ ಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ಅಲಿಗಢ್‌ ನಿವಾಸಿ ಅಭಿಷೇಕ್‌ ಅಗರ್‌ವಾಲ್‌ ತಮ್ಮ ಕುಟುಂಬದವರ ಜೊತೆಗೆ ವೃಂದಾವನಕ್ಕೆ ಭೇಟಿ ನೀಡಿದ್ದು, ದೇವಸ್ಥಾನಕ್ಕೆ ತೆರಳಿ ವಾಪಾಸು ಆಗುತ್ತಿದ್ದಾಗ ಪತ್ನಿಯ ಕೈಯಲ್ಲಿದ್ದ ಪರ್ಸನ್ನು ಮಂಗ ಕಸಿದು ಪರಾರಿಯಾಗಿದೆ.

ಕೂಡಲೇ ಅಲ್ಲಿದ್ದ ಭಕ್ತರು, ಸ್ಥಳೀಯರು ಮಂಗನ ಕೈಯಲ್ಲಿದ್ದ ಪರ್ಸನ್ನು ತೆಗೆದುಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರೂ, ಪ್ರಯೋಜನವಾಗಲಿಲ್ಲ. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಹಲವು ಗಂಟೆಗಳ ಹರಸಾಹಸ ಮಾಡಿ ಮಂಗನಿಂದ ಪರ್ಸನ್ನು ತೆಗೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ನಂತರ ಅಗರ್‌ವಾಲ್‌ ಅವರಿಗೆ ಪರ್ಸನ್ನು ವಾಪಾಸು ನೀಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

You may also like