Monkey viral video : ಪ್ರಾಣಿಗಳ ಚೇಷ್ಟೆ ನೋಡಲು ಕೆಲವೊಮ್ಮೆ ಮಜಾ ಆಗುತ್ತೆ, ಇನ್ನು ಕೆಲವೊಮ್ಮೆ ಅವುಗಳ ತುಂಟಾಟದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತೇವೆ. ಅಂತಹ ಸಾವಿರಾರು ವಿಡಿಯೋ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಕೋತಿ ಒಂದು ಮಹಿಳೆಯನ್ನು ಕಾಡುವ ವಿಡಿಯೋ ಒಂದು ವೈರಲ್ (Monkey viral video) ಆಗಿದೆ.
ಕೋತಿ ನಾನಾ ಚೇಷ್ಟೆಗಳನ್ನು ಮಾಡುತ್ತಾ ದಾರಿಹೋಕರಿಗೆ ನಾನಾ ರೀತಿಯಲ್ಲಿ ತೊಂದರೆ ಕೊಡುವುದನ್ನು ಆಗಾಗ ನೋಡಿದ್ದೇವೆ. ಕೋತಿಯ ಹಲವು ವೀಡಿಯೋಗಳು ಅಂತರ್ಜಾಲದಲ್ಲಿ ಟ್ರೆಂಡ್ ಕೂಡ ಆಗಿವೆ. ಈಗ ಕೂಡ ಅಂತಹದ್ದೇ ವಿಡಿಯೋ ರಿಲೀಸ್ ಆಗಿದೆ.
ಇನ್ಸ್ಟಾಗ್ರಾಮ್ ನ ಸಯಪ್ ಬಲಿ (@sayapbali)ಎಂಬ ಖಾತೆಯಲ್ಲಿ ಕೋತಿ ಮಾಡಿದ ಚೇಷ್ಟೆ ನೋಡಿದಾಗ ನಕ್ಕು ನಕ್ಕು ಸುಸ್ತಾಗುವುದು ಖಂಡಿತಾ.
ಹೌದು, ವಿಡಿಯೋದಲ್ಲಿ ಮಹಿಳೆಯೊಬ್ಬರು ಮಂಗನೊಂದಿಗೆ ನಿಂತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಕೋತಿ ಹುಡುಗಿಗೆ ಕಿರುಕುಳ ನೀಡಲು ಪ್ರಾರಂಭಿಸುತ್ತದೆ. ಹುಡುಗಿ ಕೋತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಸದ್ಯ ರಸಿಕತೆಯಲ್ಲಿ ಆಕೆಯ ಬಟ್ಟೆ ಒಳಗೆ ಕೋತಿ ಇಣುಕಿದಾಗ ಆಕೆ ಎಳೆದುಕೊಳ್ಳುವುದನ್ನು ಸಹಿಸದ ಕೋತಿ ಸ್ವಲ್ಪ ಜೋರಾಗಿಯೇ ಕೆನ್ನೆ ಸವರಿದಂತೆ ಕಾಣಿಸುತ್ತೆ.
ಒಟ್ಟಿನಲ್ಲಿ ಇಂತಹ ಕೆಲವು ವಿಡಿಯೋ ಗಳು ನಮಗೆ ಮನೋರಂಜನೆ ನೀಡುವುದರಲ್ಲಿ ಇನ್ನೊಂದು ಮಾತಿಲ್ಲ.
ಇದನ್ನೂ ಓದಿ: ನಾಯಿಗಳಿಗೆ ನಿಮ್ಮ ಮುಖವನ್ನು ನೆಕ್ಕಲು ಬಿಡಬಾರದು, ಯಾಕೆ ಗೊತ್ತಾ?
