Home » Manson Session: ಮಳೆಗಾಲದ ಲೋಕಸಭೆ ಅಧಿವೇಶನ – ಜೋಳ ಹಾಗೂ ತೆಂಗು ಬೆಳೆಗಾರರ ಸಮಸ್ಯೆ – ಸಂಸದ ಶ್ರೇಯಸ್ ಪಟೇಲ್ ಪ್ರಸ್ತಾಪ

Manson Session: ಮಳೆಗಾಲದ ಲೋಕಸಭೆ ಅಧಿವೇಶನ – ಜೋಳ ಹಾಗೂ ತೆಂಗು ಬೆಳೆಗಾರರ ಸಮಸ್ಯೆ – ಸಂಸದ ಶ್ರೇಯಸ್ ಪಟೇಲ್ ಪ್ರಸ್ತಾಪ

0 comments

Manson Session: ಸಂಸತ್ತಿನಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಲೋಕಸಭೆಯ ಶೂನ್ಯವೇಳೆಯಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಜೋಳ ಹಾಗೂ ತೆಂಗು ಬೆಳೆಗಾರರ ಸಮಸ್ಯೆ ಬಗ್ಗೆ ‍ಪ್ರಸ್ತಾಪಿಸಿದ್ದಾರೆ. ಫಂಗಲ್ ಕಾಯಿಲೆಯಿಂದ ಮೆಕ್ಕೆಜೋಳಕ್ಕೆ ಭಾರಿ ಹಾನಿ ಆಗಿದೆ. ಇದರಿಂದ ರೈತರು ಬಾರಿ ನಷ್ಟ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.

45 ಸಾವಿರ ಹೆಕ್ಟೇರ್‌ ಪೈಕಿ 12 ಸಾವಿರ ಹೆಕ್ಟೇರ್ ಈಗಾಗಲೇ ಹಾನಿಗೀಡಾಗಿದೆ. ಐಸಿಎಆರ್‌ ಸರ್ವೆ ಮಾಡಿ ಪರಿಹಾರ ಕೊಡಬೇಕು ಎಂದು ಸಲಹೆ ನೀಡಿದೆ. ಆದರೆ ಈ ಬಗ್ಗೆ ಈ ವರೆಗೆ ಯಾವುದೇ ಪರಿಹಾರ ತಲುಪಿಲ್ಲ. ತೆಂಗು ಬೆಳೆ ನನ್ನ ಜಿಲ್ಲೆಯಲ್ಲಿಯೇ ಹೆಚ್ಚಾಗಿದೆ. 1.18 ಲಕ್ಷ ಹೆಕ್ಟೇರ್‌ ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ತಾಲ್ಲೂಕಿನಲ್ಲಿ 82 ಸಾವಿರ ಹೆಕ್ಟೇರ್‌ ರೋಗಪೀಡಿತವಾಗಿದೆ. ತೆಂಗು ಅಭಿವೃದ್ಧಿ ಮಂಡಳಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಸದನದಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Minister KJ George: ಸಚಿವ ಕೆಜೆ ಜಾರ್ಜ್‌ಗೆ ಐಟಿ ಶಾಕ್‌

You may also like