Home » Monsoon Rain: ರಾಜ್ಯದಲ್ಲಿ ಈ ಬಾರಿ ಹೆಚ್ಚು ಮಳೆ: ತಜ್ಞರ ಪ್ರಕಾರ ಎಷ್ಟು ಮಳೆ ಬಿದ್ದಿದೆ?

Monsoon Rain: ರಾಜ್ಯದಲ್ಲಿ ಈ ಬಾರಿ ಹೆಚ್ಚು ಮಳೆ: ತಜ್ಞರ ಪ್ರಕಾರ ಎಷ್ಟು ಮಳೆ ಬಿದ್ದಿದೆ?

0 comments
Monsoon Rain

Monsoon Rain: ರಾಜಾದ್ಯಂತ ಈ ಬಾರಿ ಮಳೆ ಚೆನ್ನಾಗಿ ಆಗಿದೆ. ಕಳೆದ ಬಾರಿ ಮುಂಗಾರು ಕೈ ಕೊಟ್ಟ ಹಿನ್ನೆಲೆ 120ಕ್ಕೂ ಜಾಸ್ತಿ ತಾಲೂಕುಗಳಲ್ಲಿ ಬರ(Drought) ಆವರಿಸಿತ್ತು. ಆದರೆ ಈ ಬಾರಿ ನದಿ, ಹಳ್ಳ-ಕೊಳ್ಳ, ಜಲಾಶಯಗಳು(Dam) ಭರ್ತಿಯಾಗಿದ್ದು, ನೀರಿನ ಬವಣೆ ನೀಗಿದೆ.

ಜೂನ್ 1 ರಿಂದ ಆಗಸ್ಟ್‌ 30ವರೆಗೆ 82 ಸೆ.ಮೀ ಮಳೆಯಾಗಿದೆ. ಕರಾವಳಿ(Coastal) ಭಾಗದಲ್ಲಿ ಶೇ 20ರಷ್ಟು, ಉತ್ತರ ಒಳನಾಡಿನಲ್ಲಿ 18ರಷ್ಟು ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ 23ರಷ್ಟು ಹೆಚ್ಚಾಗಿ ಮಳೆಯಾಗಿದೆ ಎಂದು ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲೂ(Bengaluru) ಈ ಬಾರಿ ಶೇ‌ 20ರಷ್ಟು ಹೆಚ್ಚಾಗಿ ಮಳೆಯಾಗಿದೆ. ಮುಂದಿನ ಮೂರು ವಾರ ಕರಾವಳಿಯವರೆಗೆ ಸಾಧರಣ ಮಳೆಯಾಗಲಿದೆ. ಮುಂದಿನ ಎರಡು ದಿನದ ನಂತರ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ‌ ಕಡಿಮೆಯಾಗಲಿದೆ

ಸೆಪ್ಟೆಂಬರ್ 20 ನಂತರ ರಾಜ್ಯದಲ್ಲಿ ಮತ್ತೆ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ. ಆಂದ್ರ, ತೆಲಂಗಾಣದಿಂದ ಬೀದರ್ ಭಾಗದಲ್ಲಿ ಸಾಧರಣ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಒಂದು ವಾರ ಬೆಂಗಳೂರಿನಲ್ಲಿ‌ಸಾಧರಣ ಮಳೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಹಾಗೆ ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆ ತಾಪಮಾನ ಹೆಚ್ಚಾಗುವ ಸಾಧ್ಯತೆಯೂ ಇದೆ. ಬೆಂಗಳೂರಿನಲ್ಲಿ 32 ಡಿಗ್ರಿ ಹಾಗೂ ಕನಿಷ್ಟ ಉಷ್ಣಾಂಶ 28ಡಿಗ್ರಿ ಉಷ್ಣಾಂಶ‌ ದಾಖಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

You may also like

Leave a Comment