Home » Siddaramaiah: ವಿಶೇಷಚೇತನ ಮಕ್ಕಳ ಆರೈಕೆ ಮಾಡುವ ಪೋಷಕರಿಗೂ ಇನ್ನು ಮುಂದೆ ಮಾಸಿಕ ಭತ್ಯೆ: ಸಿದ್ದರಾಮಯ್ಯ

Siddaramaiah: ವಿಶೇಷಚೇತನ ಮಕ್ಕಳ ಆರೈಕೆ ಮಾಡುವ ಪೋಷಕರಿಗೂ ಇನ್ನು ಮುಂದೆ ಮಾಸಿಕ ಭತ್ಯೆ: ಸಿದ್ದರಾಮಯ್ಯ

0 comments

Siddaramaiah: ವಿಶೇಷಚೇತನ ಮಕ್ಕಳನ್ನು ಮನೆಯಲ್ಲೇ ಆರೈಕೆ ಮಾಡುವ ಪೋಷಕರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ‘ಮಾಸಿಕ ಭತ್ಯೆ’ ಯೋಜನೆಯನ್ನು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ (First Time in India) ಸಿದ್ದರಾಮಯ್ಯ (Siddaramaiah) ಸರ್ಕಾರ ಜಾರಿಗೆ ತಂದಿದೆ.

ವಿಶೇಷಚೇತನ ಮಕ್ಕಳ ಆರೈಕೆದಾರರಿಗೆ ಸಹಾಯ ಹಸ್ತ ಚಾಚುವ ಉದ್ದೇಶದಿಂದ ರಾಜ್ಯ ಸರಕಾರ 2024-25ರ ಆಯವ್ಯಯದಲ್ಲಿ ಸೆರೆಬ್ರಲ್ ಪಾಲ್ಸಿ. ಸ್ನಾಯು ಕ್ಷೀಣತೆ, ಪಾರ್ಕಿನ್ಸನ್ ಕಾಯಿಲೆ, ಮಲ್ಟಿಪಲ್ ಸ್ಕೆರೋಸಿಸ್, ಬುದ್ದಿ ಮಾಂದ್ಯತೆ, ಸ್ವಲೀನತೆ, ಬಹು ಅಂಗವೈಕಲ್ಯದಿಂದ ಬಳಲುತ್ತಿರುವ ವಿಶೇಷಚೇತನರ ಆರೈಕೆದಾರರಿಗೆ ಮಾಸಿಕ ಭತ್ಯೆ ಯೋಜನೆ ರೂಪದಲ್ಲಿಆರ್ಥಿಕ ನೆರವು ನೀಡುವ ಯೋಜನೆ ಅನುಷ್ಠಾನಗೊಳಿಸಿದೆ.

ಇದಕ್ಕಾಗಿ ರಾಜ್ಯ ಸರಕಾರ 12 ಕೋಟಿ ರೂ. ಮೀಸಲಿರಿಸಿದೆ. ದೇಶದಲ್ಲಿ ಬೇರೆ ಯಾವ ರಾಜ್ಯದಲ್ಲೂ ಈ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂಬುದು ವಿಶೇಷ. ಶೇ.75ಕ್ಕೂ ಹೆಚ್ಚು ಅಂಗವೈಕಲ್ಯದಿಂದ ಬಳಲುತ್ತಿರುವ ವಿಶೇಷಚೇತನರ ಆರೈಕೆದಾರರು ಈ ಯೋಜನೆಗೆ ಅರ್ಹರು. ವಿಶೇಷಚೇತನರಿಗೆ ಸಿಗುವ ಮಾಸಿಕ ಪಿಂಚಣಿ ಜತೆಗೆ ವಿಶೇಷಚೇತನರ ಆರೈಕೆದಾರರಿಗೆ ಮಾಸಿಕ ಸಾವಿರ ರೂ. ನೀಡಲಾಗುತ್ತದೆ.

You may also like