Home » ಮೂಡುಬಿದಿರೆ : ಸಿಡಿಲು ಬಡಿದು ಇಬ್ಬರು ಯುವಕರು ಮೃತ್ಯು ,ಮೂವರು ಅಸ್ವಸ್ಥ

ಮೂಡುಬಿದಿರೆ : ಸಿಡಿಲು ಬಡಿದು ಇಬ್ಬರು ಯುವಕರು ಮೃತ್ಯು ,ಮೂವರು ಅಸ್ವಸ್ಥ

by Praveen Chennavara
0 comments

ಮೂಡಬಿದಿರೆ : ಸಿಡಿಲು ಬಡಿದ ಇಬ್ಬರು ಯುವಕರು ಮೃತಪಟ್ಟು ಮೂವರು ತೀವ್ರ ಅಸ್ವಸ್ಥರಾದ ಘಟನೆ ಮೂಡುಬಿದಿರೆ ಕಂಚಿಬೈಲ್‌ನಲ್ಲಿ ನಡೆದಿದೆ.

ಮೃತರನ್ನು ಕಂಚಿಬೈಲು ನಿವಾಸಿಗಳಾದ ಯಶವಂತ (22) ಹಾಗೂ ಮಣಿಪ್ರಸಾದ್ (22)ಎಂದು ಗುರುತಿಸಲಾಗಿದೆ. ಅಸ್ವಸ್ಥರನ್ನು ಗಣೇಶ್, ಸಂದೀಪ್ ಹಾಗೂ ಪ್ರವೀಣ್ ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ಸಂಜೆ ಮೂಡುಬಿದಿರೆಯ ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಕಂಚಿಬೈಲ್ ಯೆರುಗುಂಡಿ ಪ್ರದೇಶದಲ್ಲಿ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಈ ಸಂದರ್ಭ ಯೆರುಗುಂಡಿ ಫಾಲ್ಸ್‌ಗೆ ತೆರಳಿದ್ದ ಐವರು ಸಿಡಿಲಾಘಾತಕ್ಕೆ ಅಸ್ವಸ್ಥಗೊಂಡಿದ್ದು, ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಮೂವರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ಸಂದೀಪ್ ನೀಡಿದ ದೂರಿನ್ವಯ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

You may also like

Leave a Comment