Home » ಮೂಡಿಗೆರೆ:ಆಪರೇಷನ್ ವೇಳೆ ವೈದ್ಯರ ನಿರ್ಲಕ್ಷ್ಯತನ!! ರೋಗಿಯ ಖಾಸಗಿ ಅಂಗಕ್ಕೆ ಹಾನಿ

ಮೂಡಿಗೆರೆ:ಆಪರೇಷನ್ ವೇಳೆ ವೈದ್ಯರ ನಿರ್ಲಕ್ಷ್ಯತನ!! ರೋಗಿಯ ಖಾಸಗಿ ಅಂಗಕ್ಕೆ ಹಾನಿ

0 comments

ಆಪರೇಷನ್ ಗೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬರ ಖಾಸಗಿ ಅಂಗಕ್ಕೆ ಗಾಯಗೊಳಿಸಿರುವ ಘಟನೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಗಾಯಗೊಂಡಿರುವ ಗಾಯಳು ಪೊಲೀಸರ ಮೊರೆ ಹೋಗಿದ್ದಾರೆ.

ಹರ್ನಿಯಾ ಆಪರೇಷನ್ ಗೆಂದು ಅಕ್ಟೋಬರ್ 12ರಂದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಯೋಗೇಂದ್ರ ಎಂಬವರು ದಾಖಲಾಗಿದ್ದು, ಆಪರೇಷನ್ ವೇಳೆಯಲ್ಲಿ ಅವರ ಖಾಸಗಿ ಅಂಗಕ್ಕೆ ಪೈಪ್ ಸಿಕ್ಕಿಸಲಾಗಿತ್ತು.ತೀವ್ರ ತರವಾಗಿ ಪೈಪ್ ಚುಚ್ಚಿದ್ದರಿಂದ ಅವರ ಖಾಸಗಿ ಅಂಗಕ್ಕೆ ಗಾಯವಾಗಿತ್ತು.

ಈ ಬಗ್ಗೆ ಅವರು ಆಸ್ಪತ್ರೆ ಸಿಬ್ಬಂದಿ ಸಹಿತ ವೈದ್ಯರ ಬಳಿಯಲ್ಲಿ ವಿಚಾರಿಸಿದಾಗ ಉಡಾಫೆಯಾಗಿ ಉತ್ತರಿಸಿದ್ದು ಇದರಿಂದ ನೊಂದ ಯೋಗೇಂದ್ರ ತಪ್ಪಿತಸ್ಥ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರ ಮೊರೆ ಹೋಗಿದ್ದಾರೆ.

You may also like

Leave a Comment