Home » ಮೂಡುಬಿದಿರೆ | ಕೊಡ್ಯಡ್ಕ ದೇವಸ್ಥಾನದ ಹೊರ ಆವರಣದಲ್ಲಿ ಯಾವುದೋ ಸಿಟ್ಟಿನಲ್ಲಿ ಘೀಳಿಟ್ಟ ಆನೆ , ಘೀಳಿಗೆ ಹೆದರಿ ಓಡಿದ ಕೂಲಿಕಾರ್ಮಿಕ ಜಾರಿ ಬಿದ್ದು ಸಾವು

ಮೂಡುಬಿದಿರೆ | ಕೊಡ್ಯಡ್ಕ ದೇವಸ್ಥಾನದ ಹೊರ ಆವರಣದಲ್ಲಿ ಯಾವುದೋ ಸಿಟ್ಟಿನಲ್ಲಿ ಘೀಳಿಟ್ಟ ಆನೆ , ಘೀಳಿಗೆ ಹೆದರಿ ಓಡಿದ ಕೂಲಿಕಾರ್ಮಿಕ ಜಾರಿ ಬಿದ್ದು ಸಾವು

by ಹೊಸಕನ್ನಡ
0 comments

ಆನೆಗೆ ಆಹಾರ ನೀಡುವ ವೇಳೆ ಯಾವುದೋ ಸಿಟ್ಟಿನಲ್ಲಿ ಆನೆ ಘೀಳಿಟ್ಟಿದ್ದರಿಂದ ಬೆದರಿ ಓಡಿದ ದೇವಸ್ಥಾನದ ಕೂಲಿ ಕಾರ್ಮಿಕ ಕಲ್ಲು ಹಾಸಿನ ನೆಲದಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ ಕೊಡ್ಯಡ್ಕ ದೇವಸ್ಥಾನದ ಹೊರ ಆವರಣದಲ್ಲಿ ಸೋಮವಾರ ನಡೆಸಿದೆ.

ಕಾರ್ಕಳ ಕೈಗಾರಿಕಾ ಪ್ರಾಂಗಣದ ಬಳಿಯ ನಿವಾಸಿ ವಿಶ್ವನಾಥ ದೇವಾಡಿಗ(58) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.

ಆನೆಯ ಮಾವುತ ಹುರುಳಿ ತರಲು ಹೋಗಿದ್ದ ಸಂದರ್ಭ ದೇವಸ್ಥಾನದ ಇನ್ನೊಬ್ಬ ಕೂಲಿ ಕಾರ್ಮಿಕ ವಿಶ್ವನಾಥ ಆನೆಯ ಬಳಿ ಹೋಗಿದ್ದಾಗ ಯಾವುದೋ ಸಿಟ್ಟಿನಲ್ಲಿ ಆನೆ ಜೋರಾಗಿ ಘೀಳಿಟ್ಟಿತ್ತು. ಇದರಿಂದ ಹೆದರಿದ ಅವರು ಓಡುವ ಭರದಲ್ಲಿ ಕಲ್ಲು ಹಾಸಿದ ನೆಲಕ್ಕೆ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮೃತರ ಸಹೋದರಿ ಸುನಂದಾ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

You may also like

Leave a Comment