Home » ರಾಜ್ಯದ ಮದರಸಗಳಲ್ಲಿ ಇನ್ನು ತರಗತಿ ಪ್ರಾರಂಭಕ್ಕೂ ಮುನ್ನ ಮೊಳಗಲಿದೆ ರಾಷ್ಟ್ರಗೀತೆ!! | ಅಲ್ಪಸಂಖ್ಯಾತ ಕಲ್ಯಾಣ ಸಚಿವರಿಂದ ಆದೇಶ ಜಾರಿ

ರಾಜ್ಯದ ಮದರಸಗಳಲ್ಲಿ ಇನ್ನು ತರಗತಿ ಪ್ರಾರಂಭಕ್ಕೂ ಮುನ್ನ ಮೊಳಗಲಿದೆ ರಾಷ್ಟ್ರಗೀತೆ!! | ಅಲ್ಪಸಂಖ್ಯಾತ ಕಲ್ಯಾಣ ಸಚಿವರಿಂದ ಆದೇಶ ಜಾರಿ

0 comments

ರಾಜ್ಯದ ಎಲ್ಲಾ ಮದರಸಗಳಲ್ಲೂ ಇನ್ನು ತರಗತಿ ಪ್ರಾರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಬೇಕು ಎಂದು ಉತ್ತರಪ್ರದೇಶ ಸರ್ಕಾರ ಆದೇಶ ಹೊರಡಿಸಿದ್ದು, ಮೇ 12 ರಿಂದಲೇ ಆದೇಶ ಜಾರಿಗೆ ಬಂದಿದೆ.

ಮಾರ್ಚ್ 24ರಂದು ನಡೆದ ಮದರಸ ಶಿಕ್ಷಣ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು,ಅದಲ್ಲದೇ ಧಾರ್ಮಿಕ ಗಾಯನಗಳನ್ನೂ ಹಾಡಲು ಅವಕಾಶ ನೀಡಲಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ದಾನಿಶ್ ಆಜಾದ್ ತಿಳಿಸಿದರು.

ರಂಜಾನ್ ಹಿನ್ನೆಲೆಯಲ್ಲಿ ಮಾರ್ಚ್ 31ರಿಂದ ಮೇ 11ರ ವರೆಗೆ ರಾಜ್ಯದ ಎಲ್ಲಾ ಮದರಸಗಳಿಗೂ ರಜೆ ನೀಡಲಾಗಿದ್ದು, ಸದ್ಯ ರಜೆ ಮುಗಿದು ಮದರಸ ಶಿಕ್ಷಣ ಶುರುವಾದ ಕಾರಣ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

You may also like

Leave a Comment