ಪ್ರಪಂಚದಾದ್ಯಂತ ಜನರು ಏನೇ ಮಾಹಿತಿ ಬೇಕಿದ್ದರೂ ಹೆಚ್ಚಾಗಿ ಗೂಗಲ್ ಅನ್ನೇ ಅವಲಂಬಿಸಿರುತ್ತಾರೆ. ಪ್ರತಿಯೊಂದು ವಿಷಯವನ್ನು ಗೂಗಲ್ ನಲ್ಲಿ ಸರ್ಚ್ ಮಾಡುವವರೂ ಇದ್ದಾರೆ. ಹಾಗೇ ಸರ್ಚ್ ಮಾಡಿದ ವಿಷಯಗಳು ಯಾರಿಗೂ ತಿಳಿದೇ ಇದ್ರೂ ಗೂಗಲ್ ಗೆ ತಿಳಿಯುತ್ತದೆ. ಇನ್ನೂ ಗೂಗಲ್ ನಲ್ಲಿ ಈ ವರ್ಷ ಅತಿಹೆಚ್ಚು ಸರ್ಚ್ ಮಾಡಿದ ವಿಷಯ ಯಾವುದೆಲ್ಲಾ ಎಂಬ ಮಾಹಿತಿಯನ್ನು ಕಂಪನಿ ನೀಡಿದೆ. ಗೂಗಲ್ ಇಯರ್ ಇನ್ ಸರ್ಚ್ 2022 ರಲ್ಲಿ ಐಪಿಎಲ್ ಅನ್ನು ಹೆಚ್ಚು ಸರ್ಚ್ ಮಾಡಲಾಗಿದೆ.
ಎರಡನೆಯದಾಗಿ ಜನರು ಅತಿಹೆಚ್ಚು ಸರ್ಚ್ ಮಾಡಿರೋದು ಕರೋನಾ ಬಗ್ಗೆ ಕೋವಿನ್ ಎಂಬ ಸೈಟ್ ಮಾಡಲಾಗಿತ್ತು, ಇದನ್ನು ಸರ್ಚ್ ಮಾಡಿದ್ದಾರೆ. ಮತ್ತು ಭಾರತದ ಜನರು ಫಿಫಾ ವಿಶ್ವಕಪ್ ಮತ್ತು ಏಷ್ಯಾ ಕಪ್‌ಗಾಗಿ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಇನ್ನೂ ‘ವಾಟ್ ಇಸ್’ ವಿಭಾಗದಲ್ಲಿ ಅಗ್ನಿಪಥ್ ಸ್ಕೀಮ್ ಅನ್ನು ಹೆಚ್ಚು ಹುಡುಕಿದ್ದಾರೆ.
ಹಾಗೇ ನ್ಯಾಟೋ ಮತ್ತು ಎನ್ಎಫ್‌ಟಿ ಬಗ್ಗೆ ಹಲವಾರು ಜನರು ಮಾಹಿತಿ ಹುಡುಕಿದ್ದಾರೆ. ‘How to’ ವಿಭಾಗದಲ್ಲಿ, ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವ ವಿಧಾನ ಹೇಗೆಂದು ತಿಳಿಯಲು ಗೂಗಲ್ ನಲ್ಲಿ ಹೆಚ್ಚು ಹುಡುಕಿದ್ದಾರೆ. ಹಾಗೂ ಜನರು ಫಿಟಿಆರ್‌ಸಿ ಅನ್ನು ಡೌನ್‌ಲೋಡ್ ಮಾಡುವುದನ್ನು ಕೂಡ ಸರ್ಚ್ ಮಾಡಿದ್ದಾರೆ.
ಇನ್ನೂ ಫಿಲ್ಡ್ ವಿಭಾಗದ ಸರ್ಚ್‌ನಲ್ಲಿ ‘ಬ್ರಹ್ಮಾಸ್ತ್ರ ಭಾಗ ಒಂದು’ ಸಿನಿಮಾದ ಬಗ್ಗೆ ಭಾರತೀಯರು ಅತಿ ಹೆಚ್ಚು ಸರ್ಚ್ ಮಾಡಿದ್ದಾರಂತೆ. ಈ ವರ್ಷದ ಎಲ್ಲಾ ಸರ್ಚ್ ಗಳಲ್ಲಿ ಇದು ಅಗ್ರಸ್ಥಾನದಲ್ಲಿದೆ ಎನ್ನಲಾಗಿದೆ. ಹಾಗೇ ಗೂಗಲ್ ಸರ್ಚ್ ನಲ್ಲಿ ಕೆಜಿಎಫ್ ಪಾರ್ಟ್-2 ಮತ್ತು ದಿ ಕಾಶ್ಮೀರ ಫೈಲ್ಸ್ ಸಿನಿಮಾದ ಬಗೆಗಿನ ಸರ್ಚ್ ಮೂರನೇ ಸ್ಥಾನದಲ್ಲಿದೆ. ಇನ್ನೂ ಆರ್‌ಆರ್ ಆರ್ ನಾಲ್ಕನೇ ಸ್ಥಾನದಲ್ಲಿದ್ದು, 5 ನೇ ಸ್ಥಾನದಲ್ಲಿ ಕಾಂತಾರ ಸಿನಿಮಾದ ಬಗೆಗಿನ ಸರ್ಚ್ ಇದೆ ಎಂದು ತಿಳಿದು ಬಂದಿದೆ.
ನ್ಯೂಸ್ ವಿಚಾರದಲ್ಲಿ, ಹೆಚ್ಚಿನ ಗೂಗಲ್ ಸರ್ಚ್ ಲತಾ ಮಂಗೇಶ್ಕರ್ ಸಾವಿನ ಬಗ್ಗೆ ಇದೆಯಂತೆ. ಹಾಗೇ ಸಿಧು ಮೂಸೆವಾಲಾ ಸಾವಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಕೂಡ ಜನರು ಗೂಗಲ್‌ನಲ್ಲಿ ಸಾಕಷ್ಟು ಹುಡುಕಿದ್ದಾರೆ ಎನ್ನಲಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಗ್ಗೆ ಕೂಡ ಜನರು ಸಾಕಷ್ಟು ಹುಡುಕಿದ್ದು, ಈ ಪಟ್ಟಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಬಗೆಗಿನ ಸರ್ಚ್ ಮೂರನೇ ಸ್ಥಾನದಲ್ಲಿದೆ ಎನ್ನಲಾಗಿದೆ.
