Kasaragodu: ಈ ಸುದ್ದಿ ಅಚ್ಚರಿ ಎನಿಸಿದರೂ ನಿಜ. 14 ವರ್ಷದ ಬಾಲಕನೋರ್ವನ ಜೊತೆ ತಾಯಿಯೊಬ್ಬಳು ಓಡಿ ಹೋಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ತನ್ನ ಮಗನ ಸ್ನೇಹಿತನ ಜೊತೆ ತಾಯಿ ಓಡಿ ಹೋಗಿದ್ದು ಮನೆ ಮಂದಿ ಶಾಕ್‌ಗೊಳಗಾಗಿದ್ದಾರೆ. ಪಾಲಕ್ಕಾಡ್ ಅಲತೂರ್ ನಿವಾಸಿಯಾದ ಬಾಲಕ ಫೆ.25 ರಂದು ಶಾಲೆಗೆ ಹೋದವ ಮನೆಗೆ ಬಂದಿರಲಿಲ್ಲ. ನಂತರ ಮಹಿಳೆ ಜೊತೆ ಓಡಿ ಹೋಗಿರುವುದು ತಿಳಿದು ಬಂದಿದೆ.
ಆಲತ್ತೂರು ಪೊಲೀಸರು ಬಾಲಕ ಮಹಿಳೆಯನ್ನು ಎರ್ನಾಕುಲಂನಲ್ಲಿ ಪತ್ತೆ ಹಚ್ಚಿದ್ದಾರೆ. ಮಹಿಳೆಯ ವಿರುದ್ಧ ಅಪಹರಣ ಪ್ರಕರಣ ದಾಖಲು ಮಾಡಲಾಗಿದೆ. ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.
ತನ್ನ ಪತಿಯಿಂದ ಮಹಿಳೆ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇದೀಗ ಮಹಿಳೆಯನ್ನು ರಿಮಾಂಡ್ ಮಾಡಲಾಗಿದೆ. ಜೊತೆಗೆ ಹುಡುಗ ತನ್ನೊಂದಿಗೆ ಸ್ವಇಚ್ಛೆಯಿಂದ ಹೋಗಿದ್ದ ಎಂದು ಪೊಲೀಸರಲ್ಲಿ ಮಹಿಳೆ ತಿಳಿಸಿದ್ದಾಳೆ.
