5
Uppinangady: ಕೌಕ್ರಡಿ ಗ್ರಾಮದ ಕಟ್ಟೆ ಮಜಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಸೋನು ಸೋಂಕರ್ ಅವರ ಪತ್ನಿ ರೀಮಾ ಸೋಂಕರ್ (26) ಮತ್ತು ಮಗು ರಿಯಾ (1) ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ.
ಇದನ್ನೂ ಓದಿ: Karnataka Weather: ದಕ್ಷಿಣ ಒಳನಾಡಿನಲ್ಲಿ ಮಳೆ ಸಂಭವ; ಉಳಿದೆಲ್ಲ ಕಡೆ ರಣಬಿಸಿಲು
ಇಂಟಿರೀಯರ್ ಡೆಕೊರೇಟರ್ ಆಗಿರುವ ಸೋನು ಸೋಂಕರ್ ಇವರು ಉತ್ತರ ಪ್ರದೇಶದ ನಿವಾಸಿ ಕೌಕ್ರಡಿಯಲ್ಲಿ ಕೃಷ್ಣಪ್ಪ ಎಂಬುವವರ ಬಾಡಿಗೆ ಮನೆಯಲ್ಲಿ ತನ್ನ ಸಂಸಾರದೊಂದಿಗೆ ವಾಸ ಮಾಡುತ್ತಿದ್ದರು.
ಎ.22 ರಂದು ಬೆಳಗ್ಗೆ ಕೆಲಸಕ್ಕೆಂದು ಹೋಗಿದ್ದು, ನಂತರ ಸಂಜೆ ಮರಳಿ ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಿ ಪತ್ನಿ, ಮಗು ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
