Home stay: ಹೋಂ ಸ್ಟೇನಲ್ಲಿ ಪ್ರವಾಸಿ ತಾಯಿ ಮಗಳಿಗೆ ಕೇರ್ ಟೇಕರ್‌ನಿಂದ ಕಿರುಕುಳ ನಡೆದ ಘಟನೆ ಸಂಬಂಧಿಸಿದಂತೆ ಮಡಿಕೇರಿ ಪೊಲೀಸರು ಮೂವರ ಮೇಲೆ ಎಫ್. ಐ. ಆರ್ ದಾಖಲಿಸಿದ್ದಾರೆ. ಮಡಿಕೇರಿ ರಾಘವೇಂದ್ರ ಟೆಂಪಲ್ ರಸ್ತೆಯಲ್ಲಿ ಕಾವೇರಪ್ಪ ಮಾಲಿಕತ್ವದ ಈಶ್ವರ ನಿಲಯ ಎಂಬ ಹೋಮ್ಸ್ ಸ್ಟೇ ನಲ್ಲಿ ಹೋಮ್ಸ್ ಸ್ಟೇ ಕೇರ್ ಟೇಕರ್‌ನಿಂದ ರಾತ್ರಿ 2 ಗಂಟೆಯಿಂದ 4 ಗಂಟೆವರೆಗೆ ಕಿರುಕುಳ ಆಗಿದೆ ಎಂದು ಬೆಂಗಳೂರಿನ ಬಾನಸವಾಡಿ ನಿವಾಸಿ ಮಮತಾ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.

ಹೋಮ್ಸ್ ಸ್ಟೇ ಕೇರ್ ಟೇಕರ್ ಕುಮಾರ ಅಲಿಯಾಸ್ ಪ್ರವೀಣ್ ಎಂಬಾತನಿಂದ ಕೃತ್ಯ ನಡೆದಿದ್ದು ಡೋರ್ ಓಪನ್ ಮಾಡುವಂತೆ ತಾಯಿ ಮಗಳಿಗೆ ಕೇರ್ ಟೇಕರ್‌ನಿಂದ ಕಿರುಕುಳ ನೀಡಲಾಗಿದೆ. ತಾಯಿ ಮಗಳು ಇಬ್ಬರೇ ಉಳಿದುಕೊಂಡಿದ್ದ ಹೋಮ್ಸ್ ಸ್ಟೇ ಭಯವಾಗಿ ಬಾಗಿಲು ಓಪನ್ ಮಾಡಲಿಲ್ಲ. ಆದರೆ ಕುಡಿದು ಬಂದಿದ್ದ ಹೋಮ್ಸ್ ಸ್ಟೇ ಕೇರ್ ಟೇಕರ್ ನಂತರ ಅವರ ಕಾರಿನ ನಾಲ್ಕು ಚಕ್ರದ ಟಯರನ್ನು ಪಂಚರ್ ಮಾಡಿ ತಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಈ ಬಗ್ಗೆ ಮಡಿಕೇರಿ ನಗರ ಪೊಲೀಸರು ಗೌಡ ಸಮಾಜ ರಸ್ತೆಯಲ್ಲಿರುವ ಪ್ರವೀಣ್, ಅದರ ಮಾಲೀಕರಾದ ಕಾವೇರಪ್ಪ, ಹಾಗೂ ಮತ್ತೊಬ್ಬ ಅಪರಿಚಿತ ವೃತ್ತಿಯ ಮೇಲೆ u/s324(4)352(79) ಮೊಕದ್ದಮೆ ದಾಖಲೆ ಮಾಡಿಕೊಂಡು ಆರೋಪಿ ಪ್ರವೀಣನನ್ನು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಮಮತಾ (47) ಹಾಗು ಮಗಳು ಕೊಡಗಿಗೆ ಪ್ರವಾಸಕ್ಕೆ ಬಂದಿದ್ದರು. ಊಟಿಯಿಂದ ಕೊಡಗಿಗೆ ಬಂದು ಹೋಮ್ಸ್ ಸ್ಟೇನಲ್ಲಿ ಉಳಿದುಕೊಂಡಿದ್ದರು.
