Home » ವಿಧಿಯೇ…ಮಗನ ಸಾವು ನಂತರ ತಾಯಿ | ಒಂದೇ ದಿನ ಹಾರ್ಟ್ ಅಟ್ಯಾಕ್ ಗೊಳಗಾದ ತಾಯಿ ಮಗ !

ವಿಧಿಯೇ…ಮಗನ ಸಾವು ನಂತರ ತಾಯಿ | ಒಂದೇ ದಿನ ಹಾರ್ಟ್ ಅಟ್ಯಾಕ್ ಗೊಳಗಾದ ತಾಯಿ ಮಗ !

0 comments

ಒಬ್ಬಳು ತಾಯಿಗೆ ಆಕೆಯ ಮಕ್ಕಳೇ ಪ್ರಪಂಚ ಎಂಬುದು ತಿಳಿದಿರುವುದೇ. ಆದರೆ ಇಲ್ಲಿ ಇದು ಮತ್ತೊಂದು ಬಾರಿ ಸಾಬೀತಾಗಿದೆ. ಮಗನಿಗೆ ಹೃದಯಾಘಾತವಾದ ವಿಚಾರ ತಿಳಿದು ತಾಯಿಗೂ ಹಾರ್ಟ್ ಅಟ್ಯಾಕ್ ಆಗಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೆಂಗೇರಿ ಉಪ ನಗರದ ವರಗೇರನಹಳ್ಳಿಯಲ್ಲಿ ನಡೆದಿದೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನವೀನ್(28) ಖಾಸಗಿ ಆಸ್ಪತ್ರೆಯೊಂದರಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆಯ ನಡುವೆಯೇ ಅದೇ ಆಸ್ಪತ್ರೆಯಲ್ಲಿ ರಾತ್ರಿ ಹೃದಯಾಘಾತದಿಂದ ನವೀನ್ ಕೊನೆಯುಸಿರೆಳೆದಿದ್ದಾರೆ. ನಂತರ ಮಗನ ಸಾವಿನ ಸುದ್ದಿ ತಿಳಿದು ಅದನ್ನು ಅರಗಿಸಿಕೊಳ್ಳಲಾಗದೇ ತಾಯಿಗೂ ಬೆಳಗಿನ ಜಾವ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಒಂದೇ ಮನೆಯಲ್ಲಿ ತಾಯಿ, ಮಗ ಇಬ್ಬರೂ ಮೃತಪಟ್ಟಿರುವುದು ದುರ್ದೈವವೇ ಸರಿ. ಮನೆಗೆ ಆಧಾರವಾಗಬೇಕಿದ್ದ ಮಗ ಸಾವನ್ನಪ್ಪಿದ್ದು, ಅದರ ಬೆನ್ನಲ್ಲೇ ಮಗನ ಸಾವಿನ ಸುದ್ದಿಯ ಸಹಿಸಲಾರದ ಹೆತ್ತ ಕರುಳು, ಆಕೆಯು ಸಾವನ್ನಪ್ಪಿದ್ದು, ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವರಗೇರನಹಳ್ಳಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

You may also like

Leave a Comment