Home » Bengaluru: ಮಗುವಿನ ಚಿಕಿತ್ಸೆಗಾಗಿ ಬುರ್ಖಾ ಧರಿಸಿ ಭಿಕ್ಷಾಟನೆ! ಆಕೆ ಹಿಂದಿದೆ ಕರುಣಾಜನಕ ಕಥೆ!

Bengaluru: ಮಗುವಿನ ಚಿಕಿತ್ಸೆಗಾಗಿ ಬುರ್ಖಾ ಧರಿಸಿ ಭಿಕ್ಷಾಟನೆ! ಆಕೆ ಹಿಂದಿದೆ ಕರುಣಾಜನಕ ಕಥೆ!

by ಕಾವ್ಯ ವಾಣಿ
0 comments

Bengaluru: ಮಗುವಿನ ಚಿಕಿತ್ಸೆ ಗಾಗಿ ಬುರ್ಕಾ ಧರಿಸಿ ತಾಯಿ ಭಿಕ್ಷೆ ಬೇಡಿದ ಮನಕಲುವ ಘಟನೆ ಬೆಂಗಳೂರಿನ (Bengaluru) ಚಂದ್ರ ಲೇಔಟ್ ನಲ್ಲಿ ನಡೆದಿದೆ.

ಮಂಡ್ಯ ಮೂಲದ ಶೋಭಾ ಶೋಭಾಗೆ ಆರು ಮತ್ತು ನಾಲ್ಕು ವರ್ಷದ ಎರಡು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಎರಡನೇ ಮಗು ಜಾಂಡಿಸ್‌ ಕಾಯಿಲೆಯಿಂದ ಬಳಲುತ್ತಿತ್ತು. ಮಗುವಿನ ಮೆಡಿಸನ್ ಮತ್ತು ಎರಡು ಮಕ್ಕಳ ಹೊಟ್ಟೆ ತುಂಬಿಸಲು ಹಣ ಇಲ್ಲದೆ ಪರದಾಡ್ತಿದ್ದ ಶೋಭಾಗೆ ಬುರ್ಕಾ ಹಾಕೊಂಡು ಭಿಕ್ಷೆ ಬೇಡಿದ್ರೆ ಹಣ ಸಿಗುತ್ತೆ ಅಂತ ಬುರ್ಕಾ ಹಾಕೊಂಡು ಭಿಕ್ಷೆ ಬೇಡುತ್ತಿದ್ದಳು.

ಆದ್ರೆ ಶೋಭಾಳನ್ನು ಕಂಡ ಸ್ಥಳೀಯರು ಮಕ್ಕಳ ಕಳ್ಳಿ ಅಂತಾ ಅನುಮಾನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಚಂದ್ರಾಲೇಔಟ್ ಪೊಲೀಸರು, ಶೋಭಾಳನ್ನು ವಶಕ್ಕೆ ಪಡೆದು ವಿಚಾರಣೆ ವೇಳೆ ಈ ಮನಕಲಕುವ ವಿಚಾರ ಬೆಳಕಿಗೆ ಬಂದಿದೆ.

You may also like