Home » ಮಗನ ಕೈ ಹಿಡಿದುಕೊಂಡು ಆತನ ಮದುವೆ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದ ತಾಯಿ ಹಠಾತ್ ಸಾವು| ಮಗನ ತೆಕ್ಕೆಯಲ್ಲೇ ಪ್ರಾಣಬಿಟ್ಟಳಾ ಈ ಮಹಾತಾಯಿ

ಮಗನ ಕೈ ಹಿಡಿದುಕೊಂಡು ಆತನ ಮದುವೆ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದ ತಾಯಿ ಹಠಾತ್ ಸಾವು| ಮಗನ ತೆಕ್ಕೆಯಲ್ಲೇ ಪ್ರಾಣಬಿಟ್ಟಳಾ ಈ ಮಹಾತಾಯಿ

0 comments

ತನ್ನ ಮಗನ ಮದುವೆ ಸಂಭ್ರಮದಲ್ಲಿದ್ದ ತಾಯಿ ಅದೇ ಖುಷಿಯನ್ನು ಅನುಭವಿಸುತ್ತಿರುವಾಗಲೇ ಮಗನ ತೆಕ್ಕೆಯಲ್ಲೇ ಪ್ರಾಣಕಳೆದುಕೊಂಡ ಘಟನೆಯೊಂದು ನಡೆದಿದೆ. ಈ ಘಟನೆಯಿಂದ ಕುಟುಂಬವೊಂದು ಈಗ ಶೋಕ ಸಾಗರದಲ್ಲಿ ಮುಳುಗಿದೆ.

ಹೌದು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಮದುವೆ ಮೆರವಣಿಗೆಯಲ್ಲಿ ದುರಂತ ಸಂಭವಿಸಿದ್ದು, ವರನ ತಾಯಿ ನೃತ್ಯ ಮಾಡುವಾಗಲೇ ಅವನ ತೋಳುಗಳಲ್ಲಿ ಕುಸಿದು ಸಾವನ್ನಪ್ಪಿದ್ದಾರೆ.

55 ವರ್ಷದ ನೀಲಂ ತನ್ನ ಮಗನ ಮದುವೆ ಮೆರವಣಿಗೆಯಲ್ಲಿ ಡಿಜೆ ಟ್ಯೂನ್ ಗೆ ನೃತ್ಯ ಮಾಡುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಆಕೆಯ ಮಗ ವರ ನೀರಜ್ ಅಮ್ಮನನ್ನು ಹಿಡಿದು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ನೀಲಂ ಮೃತಪಟ್ಟಿರುವುದಾಗಿ ಹೇಳಿದರು.

ಫೆ. 3 ರಂದು ನೀರಜ್ ಮದುವೆಯ ಮೆರವಣಿಗೆಯು ಚಿಕಾನಿಯಲ್ಲಿರುವ ಮನೆಯಿಂದ ಮರುದಿನ ಅಲ್ವಾರ್ ಜಿಲ್ಲೆಯ ಕಿಶನ್ ಗಢ್ ಬಾಸ್ ನಲ್ಲಿ ಮದುವೆಗೆ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ.

ಈ ಹೃದಯಾಘಾತ ಆಗುವ ಮೊದಲು ತನ್ನ ಮಗನ ಕೈಯನ್ನು ಹಿಡಿದು ನೃತ್ಯ ಮಾಡುತ್ತಿದ್ದರು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ನೀಲಂ ಅವರಿಗೆ ಮೊದಲೇ ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆ ಇದ್ದು ಅದಕ್ಕಾಗಿ ಔಷಧೋಪಚಾರ ಮಾಡುತ್ತಿದ್ದರು ಎಂದು ಹೇಳಲಾಗಿದೆ.

You may also like

Leave a Comment