Home » ಗಂಟಲಲ್ಲಿ ಕಪ್ ಕೇಕ್ ಸಿಲುಕಿ ಅಮ್ಮ ಸಾವು, ಮಗಳ ಮದುವೆಯ ಹಿಂದಿನ ದಿನ ನಡೆದ ದುರಂತ

ಗಂಟಲಲ್ಲಿ ಕಪ್ ಕೇಕ್ ಸಿಲುಕಿ ಅಮ್ಮ ಸಾವು, ಮಗಳ ಮದುವೆಯ ಹಿಂದಿನ ದಿನ ನಡೆದ ದುರಂತ

0 comments

Mallapuram: ಮಗಳ ಮದುವೆಗೆ ಇನ್ನೇನು ಒಂದೇ ಒಂದು ದಿನ ಇದೆ ಎನ್ನುವಾಗ ಮದುಮಗಳ ಅಮ್ಮನನ್ನು ವಿಧಿ ಕೇಕ್ ಮೂಲಕ ಕೊಂದಿದೆ. ಕಪ್ ಕೇಕ್ ತಿಂದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ. ಮಲಪ್ಪುರಂ ತನಲೂರು ನಿವಾಸಿ 44 ವರ್ಷದ ಜೈನಬಾ ಎಂಬ ಈ ಮಹಿಳೆ ಮೇ.30 ಸಂಜೆ ಸಾವನ್ನಪ್ಪಿದ್ದಾರೆ.

ಜೈನಬಾ ತಮ್ಮ ಮಗಳ ಮದುವೆ ಸಂಭ್ರಮದಲ್ಲಿದ್ದರು.. ಈ ವೇಳೆ ಸಂತಸದಿಂದ ಕೇಕ್ ಕಟ್ ಮಾಡಲಾಗಿದೆ. ರಾತ್ರಿ ಕೇಕ್ ತಿಂದು ಉಳಿದಿದ್ದ ಕಪ್ ಕೇಕ್ ಮನೆಯಲ್ಲಿ ಇಡಲಾಗಿತ್ತು. ಮರುದಿನ ಗುರುವಾರ ಸಂಜೆ ಜೈನಬಾ ಅವರು ಚಹಾ ಕುಡಿಯುತ್ತಿದ್ದ ವೇಳೆ ಬಾಕಿ ಉಳಿದಿದ್ದ ಕಪ್ ಕೇಕ್ ಸೇವಿಸಿದ್ದಾರೆ. ಕಪ್ ಕೇಕ್ ತಿನ್ನುತ್ತಿದ್ದಂತೆ, ಅದು ಜೈನಬಾರ ಗಂಟಲಲ್ಲಿ ಸಿಲುಕಿಕೊಂಡಿದೆ. ಇದರಿಂದ ಅವರ ಉಸಿರಾಟಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ತಕ್ಷಣ ಅವರನ್ನು ಕೊಟ್ಟಕ್ಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತದನಂತರ ಆಕೆಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ.ಆಕೆ ಮರುದಿನ ಸಾವನ್ನಪ್ಪಿದ್ದಾರೆ.
ತಾಯಿ ನಿಧನದಿಂದಾಗಿ ಶನಿವಾರ (ಮೇ.31) ನಡೆಯಬೇಕಿದ್ದ ಮದುವೆಯ ನಿಖಾ ಶಾಸ್ತ್ರವನ್ನು ಕೆಲವೇ ಕೆಲ ಜನರ ಸಮ್ಮುಖದಲ್ಲಿ ನೆರವೇರಿಸಿ, ಉಳಿದ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

You may also like