ಉತ್ತರ ಪ್ರದೇಶ: ಮದುವೆಗೆ ಇನ್ನೇನು ಕೇವಲ 9 ದಿನ ಬಾಕಿ ಇರುವಾಗಲೇ ವಧುವಿನ ತಾಯಿಯೊಂದಿಗೆ ವರ ಓಡಿಹೋದ ವಿಚಿತ್ರ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.
ಓಡಿ ಹೋದ ವರ ಮಗಳ ಬದಲಿಗೆ ತನ್ನ ಭಾವಿ ಅತ್ತೆಯನ್ನು ಪ್ರೀತಿಸುತ್ತಿದ್ದ. ಆದರೆ ಅವರಿಬ್ಬರ ಸಂಬಂಧದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ವರನೊಂದಿಗೆ ಪರಾರಿಯಾಗುವ ಸಂದರ್ಭ ವಧುವಿನ ತಾಯಿ, ಮಗಳ ಆಭರಣಗಳು ಮತ್ತು ಮದುವೆಗಾಗಿ ಇಟ್ಟಿದ್ದ ಹಣವನ್ನೂ ಕೂಡಾ ತೆಗೆದುಕೊಂಡು ಹೋಗಿದ್ದಾಳೆ.
ಇದೀಗ ಪರಾರಿಯಾದ ಮಹಿಳೆ, ಯುವಕನೊಂದಿಗೆ ತನ್ನ ಮಗಳ ಮದುವೆಯನ್ನು ಮಾಡಿಸಲು ಮುಂದಾಗಿದ್ದಳು. ಮದುವೆಯ ಸಿದ್ಧತೆಗಳ ನೆಪದಲ್ಲಿ ಬಾಯ್ಫ್ರೆಂಡ್ ಆಗಾಗ್ಗೆ ಆಕೆಯ ಮನೆಗೆ ಬರುತ್ತಿದ್ದ. ಆದರೆ, ಯಾರಿಗೂ ಇಬ್ಬರ ಬಗ್ಗೆ ಯಾವುದೇ ಅನುಮಾನ ಬಂದಿರಲಿಲ್ಲ. ಈಗ್ಗೆ ವರ ಆಕೆಗೆ ಒಂದು ಸ್ಮಾರ್ಟ್ ಫೋನ್ ಕೊಡಿಸಿದ್ದ. ಅದರ ಜತೆ ಅವರಿಬ್ಬರ ಸಂಬಂಧ ಕೂಡಾ ಕನೆಕ್ಟ್ ಆಗಿದೆ. ಆತ ಸ್ಮಾರ್ಟ್ ಫೋನ್ ನೀಡಿದ್ದನ್ನು ಕೂಡ ಯಾರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕಾರಣ, ಅವರಿಬ್ಬರದು ತಾಯಿ ಮತ್ತು ಮಗನ ಬಾಂದವ್ಯ ಅಂತ ಎಲ್ಲರೂ ಭಾವಿಸಿದ್ದರು.
ಆದ್ರೆ ಮೊನ್ನೆ ಏಪ್ರಿಲ್ 16ರಂದು ತನ್ನ ಮಗಳ ವಿವಾಹ ನಡೆಯಬೇಕಿತ್ತು. ಮದುವೆಗೆ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ವರ ಶಾಪಿಂಗ್‌ಗೆ ಅತ್ತೆಯನ್ನು ಕರೆದುಕೊಂಡು ಹೋಗಿದ್ದು, ಇಬ್ಬರೂ ಮನೆಯಿಂದ ಹೊರಟರು. ಇದಾದ ನಂತರ, ಅವರಿಬ್ಬರು ಮನೆಗೆ ವಾಪಸ್ ಆಗಿಲ್ಲ. ದಿನಕಳೆದರೂ ಅವರ ಸುಳಿವೇ ಇಲ್ಲ. ಇಬ್ಬರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಆದರೂ ಯಾರಿಗೂ ಅನುಮಾನ ಬಂದಿಲ್ಲ.
ಕೊನೆಗೆ ಹುಡುಗಿಯ ತಂದೆ, ಬೀರು ಪರಿಶೀಲಿಸಿದಾಗ ಚಿನ್ನ ಮತ್ತು ಹಣ ಕಾಣೆಯಾಗಿರುವುದು ಕಂಡುಬಂದಿದೆ. ಅಲ್ಲಿಗೆ ಇಬ್ಬರು ಓಡಿ ಹೋಗಿದ್ದಾರೆಂಬುದು ಖಚಿತವಾಗಿದೆ.
