2
Suicide: 14 ವರ್ಷದ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಲಾಸ್ಪುರ ಪನೋಹ್ ಗ್ರಾಮದಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಗುರುವಾರ ಈ ಘಟನೆ ನಡೆದಿದ್ದು, ಮನೆಯಲ್ಲಿ ಟಿವಿ ನೋಡುತ್ತಿದ್ದುದ್ದನ್ನು ಗಮನಿಸಿದ ತಾಯಿ ಹೆಚ್ಚು ಹೊತ್ತು ಟಿ.ವಿ. ನೋಡಬೇಡ ಹೋಮ್‌ವರ್ಕ್ ಮಾಡಿಕೋ ಎಂದು ಹೇಳಿದ್ದಾರೆ. ಹುಡುಗ ಅನಂತರ ಮನೆಯಿಂದ ಹೊರಗೆ ಹೋಗಿದ್ದಾರೆ. ತುಂಬಾ ಹೊತ್ತಾದರೂ ಮನೆಗೆ ಬರದೇ ಇರುವುದನ್ನು ಕಂಡು ಮನೆ ಮಂದಿ ಹುಡುಕಲು ಪ್ರಾರಂಭ ಮಾಡಿದ್ದಾರೆ.
ಹುಡುಕಾಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕ ಪತ್ತೆಯಾಗಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ಬಾಲಕನ ಶವವನ್ನು ಘುಮಾರ್ವಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.
