Home » Asaduddin Owaisi: ಮುಸ್ಲಿಮರು ಕಾಂಡೋಮ್ ಹೆಚ್ಚು ಬಳಸುತ್ತಾರೆ- ಓವೈಸಿ

Asaduddin Owaisi: ಮುಸ್ಲಿಮರು ಕಾಂಡೋಮ್ ಹೆಚ್ಚು ಬಳಸುತ್ತಾರೆ- ಓವೈಸಿ

0 comments
Asaduddin Owaisi

Asaduddin Owaisi: ದೇಶದಲ್ಲಿ ಮುಸ್ಲಿಮರು ಅತಿ ಹೆಚ್ಚು ಕಾಂಡೋಮ್ ಬಳಸುತ್ತಿದ್ದಾರೆ, ಹೀಗಂತ ಸರಕಾರದ ದತ್ತಾಂಶಗಳು ಹೇಳುತ್ತಿವೆ. ಆದರೂ ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂಬ ಹೇಳಿಕೆ ಮೂಲಕ ಒಂದು ಸಮದಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದ್ವೇಷ ಭಾವನೆ ಸೃಷ್ಟಿಸುತ್ತಿದ್ದಾರೆ,” ಎಂದು ಎಐಎಂಐಎಂ ಸಂಸದ ಅಸಾದುದೀನ್ ಓವೈಸಿ ಆರೋಪಿಸಿದ್ದಾರೆ.

ಇದನ್ನೂ ಓದಿ:  WhatsApp Meta: ಬಲವಂತ ಮಾಡಿದರೆ ಭಾರತ ಬಿಟ್ಟು ಹೋಗುತ್ತೇವೆ : ಸರ್ಕಾರದ ವಿರುದ್ಧ ಗುಟುರು ಹಾಕಿದ ವಾಟ್ಸಾಪ್ ಸಂಸ್ಥೆ

ಹೈದರಾಬಾದ್‌ನಲ್ಲಿ ಮಾತನಾಡಿದ ಸಂಸದ ಓವೈಸಿ, ‘ಕಳೆದ ಕೆಲವು ವರ್ಷಗಳಿಂದ ಮುಸ್ಲಿಮರಲ್ಲಿ ಫಲವತ್ತತೆ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಸರಕಾರದ ದಾಖಲೆಗಳೇ ಹೇಳುತ್ತಿವೆ. ಆದರೆ, ಮೋದಿ ಮಾತ್ರ ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ. ಹೀಗೆ ಬಿಟ್ಟರೆ ಅಲ್ಪಸಂಖ್ಯಾತರು ಭವಿಷ್ಯದಲ್ಲಿ ಬಹುಸಂಖ್ಯಾತರಾಗುತ್ತಾರೆ ಎಂಬ ದ್ವೇಷದ ವಿಷ ಬೀಜ ಬಿತ್ತುತ್ತಿದ್ದಾರೆ,” ಎಂದು ದೂರಿದರು.

ಇದನ್ನೂ ಓದಿ:  Karnataka Weather: ರಾಜ್ಯದಲ್ಲಿ 4,5 ದಿನ ಬಿಸಿ ಗಾಳಿ; ಹವಾಮಾನ ಇಲಾಖೆ ಎಚ್ಚರಿಕೆ

“ಎಲ್ಲಾ ಕಡೆ ಮೋದಿ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಮಸ್ಲಿಮರು, ದಲಿತರ ಬಗೆಗಿನ ದ್ವೇಷವೇ ಮೋದಿ ಗ್ಯಾರಂಟಿ,” ಎಂದು ಟೀಕಿಸಿದ ಓವೈಸಿ, ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂಬ ಮೋದಿ ಮಾತು ಬರಿ ಬೋಗಸ್,” ಎಂದು ಕಿಡಿಕಾರಿದರು.

You may also like

Leave a Comment