4
ಬೆಳ್ತಂಗಡಿ : ಕೆರೆಯಲ್ಲಿ ಶವವಾಗಿ ಪತ್ತೆಯಾದ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಪುತ್ರ ಸುಮಂತ್(15) ಮನೆಗೆ ಜ.17 ರಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಆಗಮಿಸಿ ಮನೆಮಂದಿ ಜೊತೆ ಘಟನೆ ಬಗ್ಗೆ ಮಾಹಿತಿ ಪಡೆದು ಬಳಿಕ ಸಾಂತ್ವನ ತಿಳಿಸಿದರು.
ಕುಟುಂಬಸ್ಥರ ಜೊತೆ ಮಾತುಕತೆ ವೇಳೆ ಸುಮಂತ್ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಎಸ್ಪಿ ಜೊತೆ ಮಾತಾನಾಡಿರುವುದಾಗಿ ಬ್ರಿಜೇಶ್ ಚೌಟ ಮಾಹಿತಿ ನೀಡಿದರು.
ಬಿಜೆಪಿಯ ಜಯಂತ್ ಕೋಟ್ಯಾನ್, ನಿತೇಶ್, ದಿನಕರ್, ವಸಂತ್ ಮಜಲ್, ವಿಜಯ ಕುಮಾರ್, ಲಕ್ಷ್ಮೀಕಾಂತ್, ಶಶಿರಾಜ್ ಶೆಟ್ಟಿ, ವಿನೀತ್ ಕೋಟ್ಯಾನ್ ಉಪಸ್ಥಿತರಿದ್ದರು.
