Home » Suhas Shetty Murder Case: ಎನ್‌ಐಎ ತನಿಖೆಗೆ ಒತ್ತಾಯಿಸಿ ಅಮಿತ್‌ ಶಾ ಗೆ ಪತ್ರ ಬರೆದ ಸಂಸದ ಚೌಟ

Suhas Shetty Murder Case: ಎನ್‌ಐಎ ತನಿಖೆಗೆ ಒತ್ತಾಯಿಸಿ ಅಮಿತ್‌ ಶಾ ಗೆ ಪತ್ರ ಬರೆದ ಸಂಸದ ಚೌಟ

0 comments

Brijesh Chowta: ಸಂಸದ ಬ್ರಿಜೇಶ್‌ ಚೌಟ ಅವರು ʼಸುಹಾಸ್‌ ಶೆಟ್ಟಿ ಭೀಕರ ಹತ್ಯೆಯ ನೋವು ಕರಾವಳಿಗರ ಹೃದಯದಲ್ಲಿ ಮನಸ್ಸಿನಲ್ಲಿ ಅಳಿಸಲಾಗದ ಆಘಾತ ಸೃಷ್ಟಿಯುಂಟು ಮಾಡಿದೆ. ಇಂತಹ ನೋವು ಇದೇ ಮೊದಲನೆಯದ್ದಲ್ಲ. ಹೊಸತೂ ಅಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ನಮ್ಮ ಭಾಗದ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆಗಳ ಪ್ರವೃತ್ತಿ ಹೆಚ್ಚಾಗುತ್ತವೆ ಎಂದು ಹೇಳಿದರು.

ಪ್ರವೀಣ್‌ ನೆಟ್ಟಾರು ಹತ್ಯೆಯ ರೀತಿಯಲ್ಲಿಯೇ ಈ ಘಟನೆ ನಡೆದಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಿಂದೂ ಕಾರ್ಯಕರ್ತೆಯರ ಹತ್ಯೆಗೆ ಕಾಂಗ್ರೆಸ್‌ ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಾನು ಗೌರವಾನ್ವಿತ ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಜೀ ಅವರಲ್ಲಿ ಪ್ರಕರಣವನ್ನು ಈ ಎನ್‌ಐಎಗೆ ವರ್ಗಾಯಿಸಿ ಮಧ್ಯಪ್ರವೇಶಿಸುವಂತೆ ವಿನಿಂತಿಸಿರುವುದಾಗಿ ಹೇಳಿದರು.

You may also like