MP K Sudhakar wife: ಕೆಲ ದಿನಗಳ ಹಿಂದೆ ಮಾಜಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಲಕ್ಷ ಲಕ್ಷ ಹಣ ಎಗರಿಸಲಾಗಿದೆ. ಇದೀಗ ಮಾಜಿ ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರ ಪತ್ನಿ ಡಿಜಿಟಲ್ ಅರೆಸ್ಟ್ ವಂಚನೆಗೊಳಗಾಗಿ 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಆಗಸ್ಟ್ 26 ರಂದು ಡಾ.ಪ್ರೀತಿ ಸುಧಾಕರ್ ಅವರಿಗೆ ಬೆಳಗ್ಗೆ 9.30 ಕ್ಕೆ ಕರೆ ಬಂದಿತ್ತು. ಮುಂಬೈ ಸೈಬರ್ ಇಲಾಖೆಯಿಂದ ಕರೆ ಮಾಡುತ್ತಿದ್ದು, ನಿಮ್ಮ ದಾಖಲೆಗಳನ್ನು ಸದ್ಭತ್ ಖಾನ್ ಎಂಬ ಅಪರಿಚಿತ ಬಳಸಿದ್ದು, ನಿಮ್ಮ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾನೆ ಎಂದು ಹೇಳಿದ್ದಾರೆ.
ವಿದೇಶಕ್ಕೆ ಕಾನೂನುಬಾಹಿರವಾಗಿ ಚಟುವಟಿಕೆ ನಡೆಸಲು ಆತ ಜನರನ್ನು ಕಳುಹಿಸಿದ್ದು, ಸದ್ಯಕ್ಕೆ ಸದ್ಭತ್ ಖಾನ್‌ನನ್ನು ಅರೆಸ್ಟ್ ಮಾಡಲಾಗಿದೆ. ನಿಮ್ಮ ಹೆಸರಿನ ದಾಖಲೆ ಆತನ ಹೇಳಿಕೆಯಲ್ಲಿರುವುದರಿಂದ ವಿಚಾರಣೆ ಮಾಡಲು ವಿಡಿಯೋ ಕಾಲ್ ಮಾಡುತ್ತಿದ್ದು, ನಿಮ್ಮ ದಾಖಲೆ ಮತ್ತು ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಹೇಳಿ ಬೆದರಿಕೆ ಹಾಕಿದ್ದಾನೆ.
ನಿಮ್ಮ ಅಕೌಂಟ್ ಅಕ್ರಮವಾಗಿದ್ದು, ಹಣ ಹಾಕಿ ಎಂದು ಬೆದರಿಕೆ ಹಾಕಿದ್ದು, ಇದರಿಂದ ಹೆದರಿದ ಪ್ರೀತಿ ಅವರು 14 ಲಕ್ಷ ಹಣವನ್ನು ವಂಚಕರ ಖಾತೆಗೆ ಹಾಕಿದ್ದಾರೆ. 45 ನಿಮಿಷದಲ್ಲಿ ವಾಪಸ್ ಹಾಕುವುದಾಗಿ ವಂಚಕ ತಿಳಿಸಿದ್ದಾನೆ. ಆರ್‌ಟಿಜಿಎಸ್ ಮೂಲಕ 14 ಲಕ್ಷ ಹಣವನು ವಂಚಕರು ತಮ್ಮ ಅಕೌಂಟ್‌ಗೆ ಹಾಕಿಸಿದ್ದಾರೆ.
ಇದನ್ನೂ ಓದಿ:Rat on Board: ಕಾನ್ಪುರದಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು 3 ಗಂಟೆ ನಿಲ್ಲಿಸಿದ ಇಲಿ
ಹಣ ಹಾಕಿದ ಬಳಿಕ ವಂಚನೆಯಾಗಿರುವುದು ತಿಳಿದು ಬಂದಿದೆ. ಇದೀಗ ಪ್ರೀತಿ ಸುಧಾಕರ್ ನೀಡಿದ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
