Home » Marriage : ಧನುಷ್ ಜೊತೆ ಮೃಣಾಲ್ ಠಾಕೂರ್ ಮದುವೆ?

Marriage : ಧನುಷ್ ಜೊತೆ ಮೃಣಾಲ್ ಠಾಕೂರ್ ಮದುವೆ?

0 comments

Marriage : ಕಾಲಿವುಡ್ ಸ್ಟಾರ್ ನಟ ಧನುಷ್ (Dhanush) ಅವರು ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಜೊತೆ ಅವರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ಮೃಣಾಲ್ ಠಾಕೂರ್ (Mrunal Thakur) ಅವರಾಗಲಿ, ಧನುಷ್ ಅವರಾಗಲಿ ಸ್ಪಷ್ಟನೆ ನೀಡಿಲ್ಲ.

ಹೌದು, ಯೆಸ್ ಸಿನಿ ದುನಿಯಾದಲ್ಲಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇರೋ ಸುದ್ದಿ ಇದು. ಕಾಲಿವುಡ್ ಸ್ಟಾರ್ ನಟ, ರಜನಿಕಾಂತ್ ಮಾಜಿ ಅಳಿಮಯ್ಯ ಮತ್ತೊಂದು ಮದುವೆಗೆ ಸಜ್ಜಾಗಿದ್ದಾರೆ. ಇಷ್ಟು ದಿನ ನಟಿ ಮೃಣಾಲ್ ಠಾಕೂರ್ ಜೊತೆ ಧನುಷ್ ಡೇಟಿಂಗ್ ಮಾಡ್ತಾ ಇದ್ದಾರೆ ಅಂತ ಗಾಸಿಪ್ ಹರಿದಾಡ್ತಾ ಇತ್ತು. ಈಗ ಈ ಜೋಡಿ ಪ್ರೇಮಿಗಳ ದಿನ ಮದುವೆ ಆಗೋಕೆ ಸಿದ್ದವಾಗಿದ್ದಾರಂತೆ.

ಈ ಸುದ್ದಿಯ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದರೂ, ನಟ ಅಥವಾ ನಟಿ ಅಥವಾ ಬೇರೆ ಯಾರೂ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ವದಂತಿಗಳನ್ನು ದೃಢೀಕರಿಸುವ ಅಥವಾ ನಿರಾಕರಿಸುವ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂಬುದನ್ನು ಗಮನಿಸಬೇಕು.

ಫೆಬ್ರವರಿ 14ರಂದು ಮದುವೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಕೆಲವರು ಶುಭಾಶಯ ಕೋರುತ್ತಿದ್ದಾರೆ. ಕೆಲವರು ಇದನ್ನು ಕೇವಲ ವದಂತಿ ಎಂದೇ ಹೇಳುತ್ತಿದ್ದಾರೆ. ಈಗ ಎಲ್ಲರ ಗಮನ ಧನುಷ್‌ ಮತ್ತು ಮೃಣಾಲ್‌ ಠಾಕೂರ್‌ ಅವರ ಮೇಲಿದ್ದು, ಇಬ್ಬರೂ ಮದುವೆ ಫೋಟೋಗಳನ್ನು ಹಂಚಿಕೊಳ್ಳುತ್ತಾರಾ ಅಥವಾ ಈ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಅಲ್ಲಿಯವರೆಗೆ, ಈ ವಿವಾಹ ಸುದ್ದಿ ಸಿನಿ ಪ್ರೇಕ್ಷಕರ ನಡುವೆ ಹಾಟ್‌ ಟಾಪಿಕ್‌ ಆಗಿಯೇ ಮುಂದುವರಿಯುವ ಸಾಧ್ಯತೆ ಇದೆ.

You may also like